ಮಂಜ ಮಸ್ಜಿದುಲ್ ಅನ್ಸಾರ್ ದರ್ಗಾ ಸಮಿತಿಗೆ ಅಧ್ಯಕ್ಷರಾಗಿ ಯೂಸುಫ್ ಗೌಸಿಯಾ ಸಾಜ
ಪುತ್ತೂರು: ಇತಿಹಾಸ ಪ್ರಸಿದ್ಧ ಮಂಜ ದರ್ಗಾ ಶರೀಫ್, ಮಸ್ಜಿದುಲ್ ಅನ್ಸಾರ್ ಹಾಗೂ ಅಲ್ ನಜಾತ್ ಮದ್ರಸ ಆಡಳಿತ ಸಮಿತಿಯ ಮಹಾ ಸಭೆ ಗೌರವಾಧ್ಯಕ್ಷ ಸಯ್ಯಿದ್ ಫಖ್ರುದ್ದೀನ್ ಹದ್ದಾದ್ ತಂಙಳ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆಯಿತು. ಮರ್ಕಝ್ ಮಸ್ನವೀ ಥಿಯೋಲಜಿ ಸೆಂಟರ್ ಮಂಜ ಇದರ ಅಧ್ಯಕ್ಷ ಡಾ ಎಮ್ಮೆಸ್ಸೆಂ ಝೈನಿ ಕಾಮಿಲ್ ಮಹಾಸಭೆ ನಿರ್ವಹಿಸಿದರು. ಗೌರವಾಧ್ಯಕ್ಷರಾಗಿ ಸಯ್ಯಿದ್ ಫಖ್ರುದ್ದೀನ್ ಹದ್ದಾದ್ ತಂಙಳ್ ಸಖಾಫಿ, ಸಲಹೆಗಾರರಾಗಿ ಝೈನುಲ್ ಉಲಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಕೆ ಎ ಮಹಮೂದುಲ್ ಫೈಝಿ ಓಲೆಮುಂಡೋವು, ಡಾ ಎಮ್ಮೆಸ್ಸೆಂ ಅಬ್ದುಲ್ ರಶೀದ್ ಝೈನಿ, ಬದ್ರುದ್ದೀನ್ ಅಝ್ಹರಿ ಕೈಕಂಬ ಇವರನ್ನು ಆಯ್ಕೆ ಮಾಡಲಾಯಿತು. ನಂತರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಯೂಸುಫ್ ಗೌಸಿಯಾ ಸಾಜ, ಪ್ರಧಾನ ಕಾರ್ಯದರ್ಶಿಯಾಗಿ ಅನಸ್ ಪೈಸಾರಿ, ಕೋಶಾಧಿಕಾರಿಯಾಗಿ ಇಂಜಿನಿಯರ್ ಉಮರ್ ಫಾರೂಕ್ ಬುಳೆರಿಕಟ್ಟೆ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಯು. ಟಿ. ಅಲಿ ಪರಿಯಲ್ತಡ್ಕ, ಅಬ್ದುಲ್ ರಹ್ಮಾನ್ ಗೇಟ್, ಉಮರ್ ಪೈಸಾರಿ, ಕಾರ್ಯದರ್ಶಿಗಳಾಗಿ ಇಬ್ರಾಹಿಂ ಮದನಿ ಪಿಎಂಕೆ ಪರ್ಲಡ್ಕ, ಎ ಕೆ ರಿಯಝ್ ಗೇಟ್, ಅಶ್ರಫ್ ಪೈಸಾರಿ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಯಾಕೂಬ್ ಪೈಸಾರಿ ಪಳ್ಳಿಕುಂಞಿ ಪಲಸ್ತಡ್ಕ, ಇಬ್ರಾಹಿಂ ಪಲಸ್ತಡ್ಕ, ಯೂಸುಫ್ ಪೈಸಾರಿ, ಎಂ.ಎಸ್ ಅಬ್ದುಲ್ಲ ಕುಂಞಿ, ಮುಹಮ್ಮದ್ ಹಾಜಿ ಕೋಡಿಯಡ್ಕ, ಅಬ್ಬು ಹಾಜಿ ಸಾಜ, ಹಂಝ ಸಾಜ, ಅಬ್ದುಲ್ಲ ಕುಂಞಿ ಸಾರ್ಯ, ಮುಹಮ್ಮದ್ ಕಾಂತಡ್ಕ, ಇಸ್ಮಾಯಿಲ್ ಎ.ಕೆ, ಖಲಂದರ್ ಶಾಫಿ ನೂಜಿ, ಹಂಝ ಪುರುಷರಕಟ್ಟೆ, ಇಸ್ಮಾಯಿಲ್ ಗೇಟ್, ಅಬೂಬಕರ್ ಉಕ್ಕುಡ, ಮುಹಮ್ಮದ್ ಅಜ್ಜಿನಡ್ಕ ಅವರನ್ನು ಆಯ್ಕೆ ಮಾಡಲಾಯಿತು. ಮರ್ಕಝ್ ಮಂಜ ಕೋಶಾಧಿಕಾರಿ ಬದ್ರುದ್ದೀನ್ ಅಝ್ಹರಿ ಸ್ವಾಗತಿಸಿದರು. ಮುದರ್ರಿಸ್ ಅಬ್ದುಲ್ ರಶೀದ್ ಸಖಾಫಿ ಅಲ್ ಮಲ್ಹರಿ ವಂದಿಸಿದರು.