ಪುತ್ತೂರು: ಭಾರೀ ಮಳೆಗೆ ಅಂಗಡಿಯೊಳಗೆ ನುಗ್ಗಿದ ನೀರು

ಪುತ್ತೂರು: ಇಂದು ಸುರಿದ ಭಾರೀ ಮಳೆಗೆ ಪುತ್ತೂರು ಪೇಟೆಯಲ್ಲಿ ಜನರು ತೊಂದರೆಗೆ ಸಿಲುಕಿದ್ದರು. ರಸ್ತೆಯಲ್ಲಿ ಭಾರೀ ನೀರು ಹರಿದ ಪರಿಣಾಮ ವಾಹನ ಸವಾರರಿಗೂ ಸಮಸ್ಯೆ ಉಂಟಾಗಿತ್ತು. ಪುತ್ತೂರು ಪೇಟೆಯ ಕೋರ್ಟ್ ರಸ್ತೆಯಲ್ಲಿ ಕೆಲ ಅಂಗಡಿಗಳಿಗೆ ನೀರು ನುಗ್ಗಿದ ಘಟನೆಯೂ ನಡೆಯಿತು. ಪುತ್ತೂರು ಪೇಟೆ, ದರ್ಬೆ ಕಡೆಗಳಲ್ಲಿ ಕೆಲ ಅಂಗಡಿಗಳಿಗೆ ನೀರು ನುಗ್ಗಿ ಅಡಚಣೆ ಆಗಿದೆ ಎನ್ನಲಾಗಿದೆ.