ಬೆಳಂದೂರು: ವರದಕ್ಷಿಣೆ ಕಿರುಕುಳ, ಜೀವ ಬೆದರಿಕೆ ಆರೋಪ- ಆಸ್ಪತ್ರೆಗೆ ದಾಖಲು
ಕಡಬ ತಾಲೂಕಿನ ಬೆಳಂದೂರು ಗ್ರಾಮದ ಅಮೈ ಎಂಬಲ್ಲಿ ಮಹಿಳೆಯೊಬ್ಬರ ಮೇಲೆ ಅತ್ತೆ ಮತ್ತು ಅತ್ತಿಗೆ ವರದಕ್ಷಿಣೆ ಕಿರುಕುಳ ನೀಡಿ ಜೀವ ಬೆದರಿಕೆಯೊಡ್ಡಿ ಕತ್ತಿಯಿಂದ ಹಲ್ಲೆಗೈದ ಬಗ್ಗೆ ವರದಿಯಾಗಿದೆ.
ಬೆಳಂದೂರು ಗ್ರಾಮದ ಅಮೈ ನಿವಾಸಿ ಕುಲದೀಪ್ ಅವರ ಪತ್ನಿ ಸರಸ್ವತಿ ಎಂಬವರ ಮೇಲೆ ಕುಲದೀಪ್ ಅವರ ತಾಯಿ ಮತ್ತು ಅಕ್ಕ ವರದಕ್ಷಿಣೆ ಕಿರುಕುಳ ನೀಡಿದ್ದಲ್ಲದೇ ಜೀವ ಬೆದರಿಕೆಯೊಡ್ಡಿ ಕತ್ತಿಯಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಹಲ್ಲೆಯಿಂದ ಗಾಯಗೊಂಡ ಸರಸ್ವತಿ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.