ಮಧ್ಯ ಸೇವಿಸಿ ಬೈಕ್ ನಿಲ್ಲಿಸಿದ ಸ್ಥಳ ಮರೆತ ವ್ಯಕ್ತಿ
ಸುಳ್ಯ :ಪೇಟೆಗೆ ಬಂದ ವ್ಯಕ್ತಿ ಮಧ್ಯಪಾನ ಸೇವಿಸಿ ತಾನು ಬಂದಿದ್ದ ಬೈಕನ್ನು ನಿಲ್ಲಿಸಿದ್ದ ಸ್ಥಳ ಮರೆತು ಹೋದ ಘಟನೆ ನಡೆದಿದೆ.
ಖಾಸಗಿ ಬಸ್ಸು ನಿಲ್ದಾಣದ ಬಳಿ ಇರುವ ಪೆಟ್ರೋಲ್ ಬಂಕ್ ಬಳಿ ಅಪರಿಚಿತ ಬೈಕ್ಕೊಂದು ಎರಡು ದಿನಗಳಿಂದ ನಿಂತಿರುವುದು ಅಲ್ಲಿಯ ಸಿಬ್ಬಂದಿಗಳಿಗೆ ಕಂಡು ಬಂದಿದೆ. ಈ ವಿಷಯವನ್ನು ಸಿಬ್ಬಂದಿಗಳು ಸುಳ್ಯ ಪೊಲೀಸರಿಗೆ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ ಬೈಕ್ ನ ರಿಜಿಸ್ಟರ್ ನಂಬರ್ ನ ವಾರಿಸುದಾರರ ವಿಳಾಸ ಸಂಗ್ರಹಿಸಿದಾಗ ಕುಡಿದ ಅಮಲಿನಲ್ಲಿ ಬೈಕ್ ನಿಲ್ಲಿಸಿದ್ದ ಜಾಗ ಮರೆತು ಹೋಗಿರುವ ವಿಷಯ ಬೆಳಕಿಗೆ ಬಂದಿದೆ. ಬಳಿಕ ಅವರನ್ನು ಠಾಣೆಗೆ ಕರೆಸಿ ಬೈಕನ್ನು ಅವರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ. ಕುಡಿದ ಮತ್ತಿನಲ್ಲಿ ಹೀಗೂ ಆಗುತ್ತಾ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.