ವಿಟ್ಲ: ಕಾಣಿಕೆ ಹುಂಡಿಯಿಂದ ಹಣ ದೋಚಿದ ಪ್ರಕರಣ, ಮೂವರು ಯುವಕರ ಬಂಧನ
ವಿಟ್ಲ: ಧಾರ್ಮಿಕ ಕೇಂದ್ರದ ಕಾಣಿಕೆ ಹುಂಡಿಯನ್ನು ಒಡೆದು ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ವಿಟ್ಲ ಕಸಬಾ ಗ್ರಾಮದ ತೌಹೀದ್(19), ಉಮರ್ ಫಾರೂಕ್ (18), ಮುಹಮ್ಮದ್ ನಬೀಲ್(18) ಎಂಬವರನ್ನು ವಶಕ್ಕೆ ಪಡೆಯಲಾಗಿದೆ.

ಕನ್ಯಾನ ಗ್ರಾಮದ ದೇಲಂತಬೆಟ್ಟು ನಿವಾಸಿ ಡಿ.ನಾರಾಯಣ ರಾವ್ ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಾರಾಯಣ ಅಧ್ಯಕ್ಷರಾಗಿದ್ದ ಧಾರ್ಮಿಕ ಶ್ರದ್ದಾ ಕೇಂದ್ರಕ್ಕೆ ಸಂಬಂಧಿಸಿದ ಕಾಣಿಕೆ ಕಟ್ಟೆಯನ್ನು ಕನ್ಯಾನ ಗ್ರಾಮದ ದೇಲಂತ ಬೆಟ್ಟು ಶಾಲಾ ಪಕ್ಕದ ರಸ್ತೆಯ ಬದಿಯಲ್ಲಿ ಹಾಗೂ ದೇಲಂತಬೆಟ್ಟು ಚರ್ಚಿನ ಕೆಳಗಡೆ ರಸ್ತೆಯ ಬದಿಯಲ್ಲಿ ಅಳವಡಿಸಿದ್ದರು ಎನ್ನಲಾಗಿದೆ.
ಕಾಣಿಕೆ ಕಟ್ಟೆಗಳಲ್ಲಿ ಸಂಗ್ರಹವಾಗುವ ಹಣವನ್ನು ತೆಗೆಯಲು ಜುಲೈ 26 ರಂದು ಸ್ಥಳಗಳಿಗೆ ತೆರಳಿದಾಗ, ಯಾರೋ ಕಳ್ಳರು ಎರಡೂ ಕಾಣಿಕೆ ಕಟ್ಟೆಗಳ ಬೀಗವನ್ನು ಒಡೆದು ಸುಮಾರು 12,000 ರೂ. ನಿಂದ 15,000 ರೂ.ವರೆಗೆ ಕಳವು ಮಾಡಿರುವುದು ಕಂಡುಬಂದಿತ್ತು ಎನ್ನಲಾಗಿದೆ
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.