ಕರಾವಳಿಕ್ರೈಂ

ಬಂಟ್ವಾಳ: ಜಾನುವಾರು ಹತ್ಯೆ ಪ್ರಕರಣದ ಆರೋಪಿಯ ಮನೆ ಜಪ್ತಿ ಮಾಡಿದ ಪೊಲೀಸರು

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಪುದು ಗ್ರಾಮದ ಮಾರಿಪಳ್ಳ ನಿವಾಸಿಯಾದ ಹಸನಬ್ಬ  ಎಂಬಾತ ಗೋ ಕಳವು, ಗೋವಧೆಯಂತಹ  ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಯಾಗಿದ್ದು  ಈತನ ಮೇಲೆ ಠಾಣಾ ಅಕ್ರ 123/2025 ಕಲಂ 303 ಬಿಎನ್‌ ಎಸ್‌ ಕಲಂ 4,7,12 ಗೋಸಂರಕ್ಷಣಾ ಕಾಯಿದೆ ಮತ್ತು 11(ಡಿ) ಗೋಹತ್ಯೆ ನಿಷೇಧ ಕಾಯಿದೆಯಡಿ ದಾಖಲಾದ ಪ್ರಕರಣದಲ್ಲಿ ದಸ್ತಗಿರಿ ಮಾಡಿ ಎಸಿಜೆ ಮತ್ತು ಜೆಎಮ್‌ ಎಫ್‌ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈತನ ವಿರುದ್ದ 2017 ನೇ ಸಾಲಿನಲ್ಲಿ ಅಕ್ರ 65/2017 ಕಲಂ 379 ಐಪಿಸಿ ಮತ್ತು 4,5,11 ಗೋಸಂರಕ್ಷಣಾ ಕಾಯಿದೆ ಮತ್ತು 11(ಎಲ್‌) ಗೋಹತ್ಯೆ ನಿಷೇಧ ಕಾಯಿದೆ , 2008 ನೇ ಸಾಲಿನಲ್ಲಿ ಅಕ್ರ 88/2018 ಕಲಂ 379 ಐಪಿಸಿ ಮತ್ತು 4,5,11 ಗೋಸಂರಕ್ಷಣಾ ಕಾಯಿದೆ ಮತ್ತು 11(ಎಲ್‌) ಗೋಹತ್ಯೆ ನಿಷೇಧ ಕಾಯಿದೆಯಂತೆ ಪ್ರಕರಣಗಳು ದಾಖಲಾಗಿದೆ. ಈತ ಗೋ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಕಳವು ಮಾಡಿ ತಂದಂತಹ ಜಾನುವಾರುಗಳನ್ನು ಯಾವುದೇ ಪರವಾನಿಗೆ ಇಲ್ಲದೇ ಮನೆಯಲ್ಲಿಯೇ ಕಸಾಯಿಖಾನೆ ನಿರ್ಮಾಣ ಮಾಡಿಕೊಂಡು ವಧೆ ಮಾಡಿ ಮಾಂಸ ಮಾಡುತ್ತಿದ್ದು  ಈತನನ್ನು ನಿಯಂತ್ರಿಸಲು ಈತನು ಮನೆಯಲ್ಲಿಯೇ ಅಕ್ರಮವಾಗಿ ನಿರ್ಮಾಣ ಮಾಡಿರುವ ಕಸಾಯಿಖಾನೆಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸಹಾಯಕ ಆಯುಕ್ತರು  ಹಾಗೂ  ಉಪವಿಭಾಗೀಯ ದಂಡಾಧಿಕಾರಿ ಮಂಗಳೂರು ಉಪವಿಭಾಗರವರಿಗೆ ವರದಿಯನ್ನು ಸಲ್ಲಿಸಲಾಗಿತ್ತು.

ಅದರಂತೆ  ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತರು  ಹಾಗೂ ಉಪವಿಭಾಗೀಯ ದಂಡಾಧಿಕಾರಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ  ಮತ್ತು ಸಂರಕ್ಷಣಾ ಅಧಿನಿಯಮ 2020 ರ ಕಲಂ 8(4) 8(5) ರಡಿಯಲ್ಲಿ  ದಿನಾಂಕ: 25/09/2025 ರಂದು  ಪ್ರಕರಣ ಸಂಖ್ಯೆ  ಎಂ.ಎ.ಜಿ/ಎಸ್‌ ಆರ್‌ .44/2025‌ ರಂತೆ ಠಾಣಾ ಅಕ್ರ 123/2025  ನೇ ದರಂತೆ ಹಸನಬ್ಬ  ಈತನ ವಶದಲ್ಲಿರುವ  ಪುದು ಗ್ರಾಮ ಪಂಚಾಯತ್‌ ವ್ಯಾಪ್ತಿಯ  ಮಾರಿಪಳ್ಳ ಪಾಡಿ ಎಂಬಲ್ಲಿರುವ ಮನೆನಂಬ್ರ  6-54 ಹಾಗೂ 6-54(1) ದ ಮನೆಯನ್ನು / ಅಕ್ರಮ ಕಸಾಯಿ ಕಾನೆಯನ್ನು ಜಫ್ತಿ ಮಾಡಿ ಸರಕಾರದ  ವಶಕ್ಕೆ  ಪಡೆಯಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಇಂತಹ ಪ್ರಕರಣದಲ್ಲಿ ಮನೆ/ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಮಾಡಿರುವುದು ಇದು ಮೊದಲ ಪ್ರಕರಣವಾಗಿದೆ.

Leave a Reply

Your email address will not be published. Required fields are marked *

error: Content is protected !!