ಕರಾವಳಿರಾಜಕೀಯ

ವಿಮೆನ್ ಇಂಡಿಯಾ ಮೂವ್ಮೆಂಟ್ ಪುತ್ತೂರು ಅಸೆಂಬ್ಲಿ ಸಮಿತಿ ಸಭೆ

ಪುತ್ತೂರು: ವಿಮೆನ್ ಇಂಡಿಯಾ ಮೂವ್ಮೆಂಟ್ (ವಿಮ್) ಪುತ್ತೂರು ಸಮಿತಿ ವತಿಯಿಂದ ಮಾಸಿಕ ಸಭೆ ಅಧ್ಯಕ್ಷರಾದ ಝಹಿದ ಸಾಗರ್ ನೇತೃತ್ವದಲ್ಲಿ ಉಪ್ಪಿನಂಗಡಿಯಲ್ಲಿ ನಡೆಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರಾದ ಝಹಿದ ಸಾಗರ್ ರವರು ದೇಶದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ನ್ಯಾಯಾಯುತವಾದ ಹೋರಾಟ ಮಾಡಲುಕೂಡ ಅನುಮತಿ ಕೊಡದೆ ಅವರನ್ನು ಸತಾಯಿಸಿ ಅವರ ಮೇಲೆಯೇ ಕೇಸುಗಳನ್ನು ಹಾಕಿ ಸತಾಯಿಸುತ್ತಿರುವ ಈ ಕಾಲ ಘಟ್ಟದಲ್ಲಿ ರಾಜಕೀಯದಲ್ಲಿ ಮಹಿಳೆಯರು ಮುಂದುವರೆಯ ಬೇಕಾದ ಅನಿವಾರ್ಯತೆ ಮಹಿಳೆಯರಿಗೆ ಅಗತ್ಯವಾಗಿದೆ ಹಾಗೂ ಮುಂದಿನ ದಿನಗಳಲ್ಲಿ ವಿಮ್ ಬೆಳವಣಿಗೆಗೆ ಮಹತ್ವವಿದೆ ಅದಕ್ಕಾಗಿ ಮೂಲೆ ಮೂಲೆಗಳಲ್ಲಿ ವಿಮ್ ಸದಸ್ಯತ್ವ ಅಭಿಯಾನ ನಡೆಸಿ ಸದಸ್ಯರನ್ನು ಸೇರಿಸಬೇಕು ಎಂದು ತಿಳಿಸಿದರು. ಮತ್ತು ಕಾರ್ಯಕ್ರಮಗಳ ಬಗ್ಗೆ ಸುದೀರ್ಘ ಚರ್ಚೆಗಳ ವಿಷಯ ನಡೆಯಿತು. ಈ ಸಂದರ್ಭದಲ್ಲಿ ವಿಮೆನ್ ಇಂಡಿಯಾ ಮ್ಮೂಮೆಂಟ್ (ವಿಮ್) ಪುತ್ತೂರು ಅಸೆಂಬ್ಲಿ ಉಪಾಧ್ಯಕ್ಷರಾದ ಝರೀನಾ, ಕಾರ್ಯದರ್ಶಿ ಸೌದ, ಜೊತೆ ಕಾರ್ಯದರ್ಶಿ ಫಾತಿಮಾ ನಿರ್ಮ ಮತ್ತು ಕ್ಷೇತ್ರ ಸಮಿತಿಯ ಸದಸ್ಯರುಗಳಾದ ನುಶ್ರತ್ ಮುಂತಾಜ್ ಹಾಗೂ ನಫೀಸ ಮಠ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!