ಪುತ್ತೂರು: ಆರ್ಲಪದವು ಎಂಬಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.1ರಂದು ಸಂಜೆ ವರದಿಯಾಗಿದೆ. ಪಾಣಾಜೆ ಗ್ರಾಮದ ಆರ್ಲಪದವು ನಿವಾಸಿ ಶಿವಪ್ಪ ನಾಯ್ಕ ಎಂಬವರ ಪುತ್ರ ವಿಜಯ ಕುಮಾರ್ (25ವ)ಎಂಬವರು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವಿವಾಹಿತರಾಗಿದ್ದ ಮೃತರು ತಂದೆ ಶಿವಪ್ಪ ನಾಯ್ಕ, ತಾಯಿ , ಸಹೋದರ, ಮತ್ತು ಸಹೋದರಿಯನ್ನು ಅಗಲಿದ್ದಾರೆ.