ಸುಳ್ಯ ಸಂತ ಬ್ರಿಜೆಡ್ಸ್ ಚರ್ಚ್ ಕ್ರಿಸ್ಮಸ್ ಸೌಹಾರ್ದ ಕೂಟ, ಸಾಧಕರಿಗೆ ಸನ್ಮಾನ
ಸುಳ್ಯ ಸಂತ ಬ್ರಿಜೆಡ್ಸ್ ಚರ್ಚ್ ಐ.ಸಿ.ವೈ.ಎಂ,ಯುವ ಆಯೋಗ ಮತ್ತು ಪಾಲನಾ ಪರಿಷದ್ ಸಹಕಾರದೊಂದಿಗೆ ಡಿ.31 ರಂದು ಕ್ರಿಸ್ಮಸ್ ಸೌಹಾರ್ದಕೂಟ-2023 ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸಂತ ಬ್ರಜಡ್ಸ್ ಚರ್ಚ್ ಆವರಣದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾವೈಕ್ಯತೆಯ ಸಂದೇಶ ಸಾರುವ ನಿಟ್ಟಿನಲ್ಲಿ ಮೂರು ಧರ್ಮದ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ನಡೆದು ಪತ್ರಿಕೋದ್ಯಮದಿಂದ ಸುದ್ದಿ ಪತ್ರಿಕೆಯ ವರದಿಗಾರ ಹಸೈನಾರ್ ಜಯನಗರ, ಸಮಾಜ ಸೇವೆಯಲ್ಲಿ ಬಿ ಕೇಶವ ಬಂಗ್ಲೆಗುಡ್ಡೆ, ಶ್ರೀಮತಿ ಅಪೋಲಿನ್ ಡಿಸೋಜಾ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೈಂಟ್ ಬ್ರಿಜೆಡ್ಸ್ ಚರ್ಚಿನ ಧರ್ಮ ಗುರುಗಳಾದ ರೆlಫಾlವಿಕ್ಟರ್ ಡಿಸೋಜಾ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸುಳ್ಯ ನಗರ ಪಂಚಾಯತ್ ಸದಸ್ಯರುಗಳಾದ ಎಂ ವೆಂಕಪ್ಪಗೌಡ,ಡೇವಿಡ್ ಧೀರಾ ಕ್ರಾಸ್ತ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಕುರಿತು ಮಾತನಾಡಿ ‘ಕ್ರಿಸ್ಮಸ್ ಸೌಹಾರ್ದ ಕೂಟದಲ್ಲಿ ಭಾವೈಕ್ಯತೆಯನ್ನು ಮೂಡಿಸುವ ಕಾರ್ಯ ಯಶಸ್ವಿಯಾಗಿ ನಡೆದಿದ್ದು ಇಂತಹ ಕಾರ್ಯಕ್ರಮ ಸಮಾಜಕ್ಕೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.ಸನ್ಮಾನಿತರ ವತಿಯಿಂದ ಹಸೈನಾರ್ ಜಯನಗರ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಗೌರವ ಉಪಸ್ಥಿತರಾಗಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ನವೀನ್ ಮಚಾದೋ ಜಯನಗರ,ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯನಿಯರಾದ ಸಿಸ್ಟರ್ ಬಿನೋಮಾ,ಸಿಸ್ಟರ್ ಅಂತೋನಿ ಮೇರಿ,ಪಾಲನಾ ಸಮಿತಿ ಕಾರ್ಯದರ್ಶಿ ಜೂಲಿಯಾನ ಕ್ರಾಸ್ತಾ,ಕೆಥೋಲಿಕ್ ಸುಳ್ಯ ಘಟಕದ ಅಧ್ಯಕ್ಷ ಗೋಡ್ ಫ್ರೀ ಮೊಂತೇರೋ,ಐ ಸಿ ವೈ ಎಂ ಅಧ್ಯಕ್ಷ ಜೋಯ್ ಟೋನಿ ಡಿಸೋಜ,ವೈ ಸಿ ಎಸ್ ಅಧ್ಯಕ್ಷ ಆಂಡ್ರು ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.
ಕ್ರಿಸ್ಮಸ್ ಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಆಟೋ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ಉಪಾಧ್ಯಕ್ಷ ನವೀನ್ ಮಚಾದೋ ಜಯನಗರ ಸ್ವಾಗತಿಸಿ ಕಾರ್ಯದರ್ಶಿ ಜೂಲಿಯಾನ ಕ್ರಾಸ್ತ ವಂದಿಸಿದರು.
ಸನ್ಮಾನ ಕಾರ್ಯಕ್ರಮದ ಬಳಿಕ ನೂತನ ವರ್ಷದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ವೇದಿಕೆಯಲ್ಲಿ ನಡೆಯಿತು. ಸ್ಥಳೀಯ ನೂರಾರು ಕ್ರಿಶ್ಚಿಯನ್ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಯುವ ಸಮಿತಿಯ ಪದಾಧಿಕಾರಿಗಳು ಕಾರ್ಯಕ್ರಮ ನಿರೂಪಿಸಿದರು.