ರೈತರ ಪರ ಎಂದು ಹೇಳಿಕೊಳ್ಳುವ ಸರಕಾರ ಸತ್ತಂತಾಗಿದೆ- ಯಡಿಯೂರಪ್ಪ ಆಕ್ರೋಶ
ನನಗೆ 81 ವರ್ಷವಾದರೂ ಜನಗಳ ಕಷ್ಟ ಸುಖ ಕೇಳಲು ನಾನು ನಮ್ಮ ನಾಯಕರೊಂದಿಗೆ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ರಾಜ್ಯದಲ್ಲಿ ಮಳೆ ಇಲ್ಲದೆ ಬೆಳೆಗಳೆಲ್ಲ ನಷ್ಟವಾಗುತ್ತಿದೆ, ವಿದ್ಯುತ್ ಸಮಸ್ಯೆ ಹೆಚ್ಚಾಗಿದ್ದು ರೈತರ ಪರ ಎಂದು ಹೇಳಿಕೊಳ್ಳುವ ಸರಕಾರ ಸತ್ತಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸರಕಾರದ ವಿರುದ್ದ ಕಿಡಿ ಕಾರಿದ್ದಾರೆ.
ಈಗ ಮಳೆ ಇಲ್ಲ,ಜತೆಗೆ ವಿದ್ಯುತ್ ನ ಸಮಸ್ಯೆ ಹೆಚ್ಚಾಗಿದೆ ವಿದ್ಯುತ್ ಸರಿಯಾಗಿ ನೀಡಿದರೆ ಅಲ್ಪ ಸ್ವಲ್ಪ ಕೊಳವೆ ಬಾವಿಯ ಮುಖಾಂತರ ನೀರನ್ನು ಬಿಟ್ಟುಕೊಂಡು ಬೆಳೆಗಳನ್ನು ರಕ್ಷಿಸಿಕೊಳ್ಳಬಹುದಾಗಿತ್ತು. ಇಂತಹ ಯಾವುದೇ ಜನಪರ ಕಾರ್ಯಕ್ರಮಗಳ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ. ಇದನ್ನು ಬಿಟ್ಟು ಪ್ರಧಾನಿ ಮೋದಿ ಅವರ ಮೇಲೆ ಟೀಕೆಗಳನ್ನು ಮಾಡುವುದು ಎಷ್ಟರಮಟ್ಟಿಗೆ ಸರಿಯಾಗಿದೆ.ಮೊದಲು ತಾವು ರಾಜ್ಯದ ಜನರ ಕಷ್ಟ ಸುಖಕ್ಕೆ ಸ್ಪಂದಿಸಿ ಬೇಕಾಗಿದೆ ಎಂದರು.
ರಾಜ್ಯದ ಜನರು ಬೆಂಬಲ ಸಹಕಾರ ನೀಡಿದರೆ ರಾಜ್ಯ ಸರ್ಕಾರದ ವಿರುದ್ಧ ಮುಂದೆ ನಾನು ಸತ್ಯಾಗ್ರಹ ಮಾಡುತ್ತೇನೆ ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.