ಸಾಲ್ಮರ ಮೌಂಟನ್ ವ್ಯೂ ಅಸ್ವಾಲಿಹಾ ವುಮೆನ್ಸ್ ಕಾಲೇಜ್ ಹಾಗೂ ದಾರುಲ್ ಫಲಾಹ್ ಮದ್ರಸ ವಿದ್ಯಾರ್ಥಿಗಳ ವಾರ್ಷಿಕ ಕಲಾ ಪ್ರತಿಭಾ ಕಾರ್ಯಕ್ರಮ ಸಮಾರೋಪ
ಪುತ್ತೂರು : ಸಾಲ್ಮರ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಗಳ ಅಧೀನದ
ಅಸ್ವಾಲಿಹಾ ವುಮೆನ್ಸ್ ಶರೀಅತ್,
ಪಿ.ಯು.ಕಾಲೇಜ್ ವಿದ್ಯಾರ್ಥಿನಿಯರ ವಾರ್ಷಿಕ ಇಸ್ಲಾಮಿಕ್ ಕಲಾ ಪ್ರತಿಭಾ ಕಾರ್ಯಕ್ರಮ ಗ್ಲೋ-2ಕೆ23 ಮತ್ತು ದಾರುಲ್ ಫಲಾಹ್ ಮದ್ರಸ ವಿದ್ಯಾರ್ಥಿಗಳ ವಾರ್ಷಿಕ ಕಲಾ ಪ್ರತಿಭಾ ಕಾರ್ಯಕ್ರಮದ ಸಮಾರೋಪ ಸಮಾರಂಭವು ಶಾಲಾ ಮೈದಾನದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯು. ಮುಹಮ್ಮದ್ ಹಾಜಿಯವರು ಪ್ರವಾದಿಯವರ ಶಾಂತಿಯ ಸಂದೇಶದ ಬಗ್ಗೆ ವಿವರಿಸಿದರು. ಸಂಸ್ಥೆಯ ಸಂಚಾಲಕರಾದ ಹಾಜಿ ಮುಹಮ್ಮದ್ ಸಾಬ್, ಕಾರ್ಯದರ್ಶಿ ಹಾಜಿ ಅಬ್ದುಲ್ ರಹಿಮಾನ್ ಅಝಾದ್ , ಕೋಡಿಂಬಾಡಿ ಜುಮ್ಮಾ ಮಸೀದಿ ಅಧ್ಯಕ್ಷ ಉಮರ್ ಹಾಜಿ ಕೋಡಿಂಬಾಡಿ, ಕೆಮ್ಮಾಯಿ ಜುಮ್ಮಾ ಮಸೀದಿ ಅಧ್ಯಕ್ಷ ಬಶೀರ್ ಹಾಜಿ ದಾರಂದಕುಕ್ಕು, 'ಸಮಸ್ತ' ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಡ್ರೀಮ್ ಲೈಫ್ ಎಜುಕೇಶನ್
ಸೋಶಿಯಲ್ ಸೊಸೈಟಿ ಕೇರಳ ಇದರ ಅಧ್ಯಕ್ಷ ಅಬ್ದುಲ್ ಕರೀಂ ವಿಟ್ಲ, ಸಾಲ್ಮರ ಕನ್ನಡ ಪ್ರೌಡ ಶಾಲಾ ಶಿಕ್ಷಕ ಮಂಜುನಾಥ ರೈ ಮೊದಲಾದವರು ಶುಭ ಹಾರೈಸಿದರು. ಸಮಾರಂಭದಲ್ಲಿ ಮೌಂಟನ್ ವ್ಯೂ ದಾರುಲ್ ಫಲಾಹ್ ಮದ್ರಸ ವಿದ್ಯಾರ್ಥಿಗಳಿಂದ ವಿವಿಧ ಸಾಹಿತ್ಯ ಕಲಾ ಸ್ಪರ್ಧಾ ಕಾರ್ಯಕ್ರಮ ನಡೆಯಿತು.ಕಾಲೇಜ್ ನ ಒಳಾಂಗಣದಲ್ಲಿ ಅಸ್ವಾಲಿಹಾ ವುಮೆನ್ಸ್ ಕಾಲೇಜ್ ವಿದ್ಯಾರ್ಥಿನಿಯರ 15 ದಿನಗಳ ಕಾಲ ನಡೆದ ಗ್ಲೋ-2ಕೆ23 ವಾರ್ಷಿಕ ಸ್ಪರ್ಧಾ ಕಾರ್ಯಕ್ರಮದಲ್ಲಿ ಡೆಸ್ಟಲ್ಲೋ ತಂಡ ಪ್ರಥಮ ಸ್ಥಾನವನ್ನು ಕೋನ್ಫಿಅನ್ಝ ತಂಡ ದ್ವಿತೀಯ ಸ್ಥಾನವನ್ನೂ ಪಡೆಯಿತು.
ಸಮಾರಂಭದಲ್ಲಿ ಪ್ರತಿಭಾ ಪ್ರದರ್ಶನದಲ್ಲಿ ಭಾಗವಹಿಸಿದ್ದ ಹಾಗೂ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಟ್ರೋಫಿ ಮತ್ತು ವಿವಿಧ ಬಹುಮಾನಗಳನ್ನು ಉದ್ಯಮಿಗಳಾದ ಉಮರ್ ಹಾಜಿ ಕೋಡಿಂಬಾಡಿ ಮತ್ತು ಬಶೀರ್ ಹಾಜಿ ದಾರಂದಕುಕ್ಕು ಅವರು ವಿತರಿಸಿದರು. ಶಾಲಾ ದೈಹಿಕ ಶಿಕ್ಷಕರಾದ ಅಶ್ರಫ್ ಮತ್ತು ಜಯರಾಮ್ ವಿವಿಧ ಕಾರ್ಯಕ್ರಮಗಳಲ್ಲಿ ಸಹಕರಿಸಿದರು. ಸಂಸ್ಥೆಯ ಎಲ್ಲಾ ಶಿಕ್ಷಕ ಶಿಕ್ಷಕಿಯರು, ಶಿಕ್ಷಕೇತರ ವೃಂದದವರು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರತಿ ವರ್ಷದಂತೆ ಉದ್ಯಮಿ ಝಕರಿಯಾ ಮಾಂತೂರು ಅವರ ಪ್ರಾಯೋಜಕತ್ವದಲ್ಲಿ ಸಮಾರಂಭದಲ್ಲಿ ಸಿಹಿತಿಂಡಿ ವಿತರಿಸಲಾಯಿತು.
ಉಸ್ತಾದ್ ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಿಸಿದರು. ಶಾಲಾ ಶಿಕ್ಷಕ ರವೂಫ್ ಮತ್ತು ಮದ್ರಸ ಶಿಕ್ಷಕ ನಝೀರ್ ಅರ್ಶದಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಸಿಬ್ಬಂದಿ ಹಮೀದ್ ಕೊನೆಗೆ ವಂದಿಸಿದರು.