ಬಿರುಸಿನ ಬ್ಯಾಟಿಂಗ್ ನಡೆಸಲು ಸಜ್ಜಾದ ಅರುಣ್ ಕುಮಾರ್ ಪುತ್ತಿಲ..!
ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ಬ್ಯಾಟ್ ಚಿಹ್ನೆ ಸಿಕ್ಕಿದ್ದು ಅವರ ಅಭಿಮಾನಿಗಳು, ಬೆಂಬಲಿಗರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.
ಪುತ್ತಿಲ ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರೆ ಎಂದು ಪ್ರಚಾರವಾಗಿತ್ತಾದರೂ ಅವರು ನಾಮಪತ್ರ ವಾಪಸ್ ಪಡೆಯದೇ ಚುಣಾವಣಾ ಅಖಾಡದಲ್ಲಿ ತೊಡೆ ತಟ್ಟಿ ನಿಂತಿದ್ದಾರೆ.
ಪುತ್ತಿಲ ಅವರಿಗೆ ಚುನಾವಣಾ ಆಯೋಗದಿಂದ 7 ಕ್ರಮಾಂಕ ನಂಬರ್ ಸಿಕ್ಕಿದ್ದು 7ನೇ ಕ್ರಮಾಂಕದಲ್ಲಿ ಬಂದು ಧೋನಿ ರೀತಿಯಲ್ಲಿ ಗೇಮ್ ಫಿನಿಶ್ ಮಾಡುತ್ತಾರೆ ಎನ್ನುವ ಆಶಾಭಾವನೆ ಪುತ್ತಿಲ ಬಳಗದವರದ್ದು. ಪುತ್ತಿಲ ಅಬ್ಬರದ ಬ್ಯಾಟಿಂಗ್‌ಗೆ ಕಡಿವಾಣ ಹಾಕಲು ಬಿಜೆಪಿ ಮಾಸ್ಟರ್ ಪ್ಲಾನ್ ಸಿದ್ದಪಡಿಸುತ್ತಿದೆ ಎನ್ನಲಾಗಿದೆ.
ಪುತ್ತಿಲರು ಭರ್ಜರಿ ಬ್ಯಾಟಿಂಗ್ ನಡೆಸಿದ್ದೇ ಆದಲ್ಲಿ ಫಲಿತಾಂಶ ಕುತೂಹಲಕಾರಿಯಾಗಿರಲಿದೆ. ಅಂತಿಮವಾಗಿ ಕಪ್ ಯಾರಿಗೆ ಎನ್ನುವುದು ಮೇ.13ರಂದು ಗೊತ್ತಾಗಲಿದೆ.