ಖ್ಯಾತ ಉದ್ಯಮಿ, ಶಿಕ್ಷಣ ಸಂಸ್ಥೆಗಳ ರೂವಾರಿ, ಸಮಾಜ ಸೇವಕ ಕೆ.ಪಿ.ಅಹಮ್ಮದ್ ಹಾಜಿ ಆಕರ್ಷಣ್ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗೌರವ
2023ನೇ ಸಾಲಿನ ದಕ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಶಿಕ್ಷಣ ಸಂಸ್ಥೆಗಳ ರೂವಾರಿ, ಖ್ಯಾತ ಉದ್ಯಮಿಗಳೂ ಆಗಿರುವ ಕೆ.ಪಿ.ಅಹಮ್ಮದ್ ಹಾಜಿ ಆಕರ್ಷಣ್ ಆಯ್ಕೆಯಾಗಿದ್ದಾರೆ.
ಪುತ್ತೂರಿನ ಹಲವಾರು ಸಂಘ ಸಂಸ್ಥೆಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರುವ ಕೆ.ಪಿ ಅಹ್ಮದ್ ಹಾಜಿಯವರು ಅನ್ಸಾರುದ್ದೀನ್ ಎಜುಕೇಶನ್ ಟ್ರಸ್ಟ್ ಪುತ್ತೂರು ಮತ್ತು ಮೌಂಟನ್ ವ್ಯೂ ಎಜುಕೇಶನಲ್ ಇನ್‌ಸ್ಟಿಟ್ಯೂಷನ್ಸ್ ಇದರ ಸ್ಥಾಪಕರು ಮತ್ತು ಮ್ಯಾನೇಜಿಂಗ್ ಟ್ರಸ್ಟಿಗಳೂ ಆಗಿದ್ದಾರೆ. ಇವರು ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಕುಂಬ್ರ ಮತ್ತು ಅಲ್ ಕೌಸರ್ ಶರೀಯತ್ ಕಾಲೇಜು ಪುತ್ತೂರು ಇದರ ಮ್ಯಾನೇಜಿಂಗ್ ಟ್ರಸ್ಟಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಯಂಗ್ ಮೆನ್ಸ್ ಎಸೋಸಿಯೇಶನ್ ಕುಂಬ್ರ, ಜಮೀಯ್ಯತ್ತುಲ್ ಫಲಾಹ್ ದ.ಕ.ಜಿಲ್ಲೆ, ಪುತ್ತೂರು ಘಟಕ ಮತ್ತು ಪುತ್ತೂರು ತಾಲೂಕು ಅಡಿಕೆ ವರ್ತಕರ ಸಂಘದ ಸ್ಥಾಪಕಾಧ್ಯಕ್ಷರೂ ಆಗಿದ್ದಾರೆ. ಆಕರ್ಷಣ್ ಗ್ರೂಪ್ ಸಂಸ್ಥೆಗಳ ಚೇರ್ಮೆನ್ ಆಗಿ ಆಕರ್ಷಣ್ ಇನ್‌ಫ್ರಾಸ್ಟ್ರಕ್ಚರ್ ಇದರ ಮ್ಯಾನೇಜಿಂಗ್ ಪಾರ್ಟ್ನರ್ ಆಗಿ ಆಕರ್ಷಣ್ ಡೆವಲಪ್ಪರ್ಸ್ ಇದರ ಮ್ಯಾನೇಜಿಂಗ್ ಪಾರ್ಟ್ನರ್ ಆಗಿ, ಆಕರ್ಷಣ್ ಗ್ರಾನೈಟ್ ಇದರ ಮ್ಯಾನೇಜಿಂಗ್ ಪಾರ್ಟ್ನರ್ ಆಕರ್ಷಣ್ ಇಂಡಸ್ಟ್ರೀಸಿನ ಪಾಲುದಾರರಾಗಿ ಸಿಟಿಗೋಲ್ಡ್ ಪುತ್ತೂರು ಇದರ ಪಾಲುದಾರರಾಗಿದ್ದಾರೆ.
ಅನ್ಸಾರುದ್ದೀನ್ ಓರ್ಫನೇಜ್ ಪುತ್ತೂರು ಇದರ ಅಧ್ಯಕ್ಷರಾಗಿ, ಕುಂಬ್ರ ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿ ಪುತ್ತೂರು ತಾಲೂಕು ಸೀರತ್ ಕಮಿಟಿಯ ಅಧ್ಯಕ್ಷರಾಗಿ, ಸಿಡ್ಕೊ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಸೌತ್ ಕೆನರಾ ಮುಸ್ಲಿಂ ಎಜುಕೇಶನಲ್ ಟ್ರಸ್ಟ್ ಮಂಗಳೂರು,ಹಝ್ರತ್ ಸಯ್ಯದ್ ಮದನಿ ರೆಸಿಡೆನ್ಶಿಯಲ್ ಸ್ಕೂಲ್ ಕೋಟೆಕಾರ್ ಇದರ ಮಾಜಿ ಉಪಾಧ್ಯಕ್ಷರಾಗಿರುವ ಇವರ ಕರ್ನಾಕಟ ರಾಜ್ಯ ವಕ್ಫ್ ಕೌನ್ಸಿಲ್‌ನ ಮಾಜಿ ಸದಸ್ಯ. ಜಿಲ್ಲಾ ಕಾಂಗ್ರೆಸ್ ಮತ್ತು ಮುಸ್ಲಿಂ ಸೆಂಟ್ರಲ್ ಕಮಿಟಿ ದಕ, ಉಡುಪಿ ಇದರ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಬ್ಯಾರೀಸ್ ವೆಲ್ಫೇರ್ ಎಸೋಸಿಯೇಶನ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು ಅವರು ದಿ|ಎಸ್.ಮೊಯ್ದಿನ್ ಹಾಗೂ ಕೆ.ರುಕ್ಯರವರ ಪುತ್ರ.