ಕರಾವಳಿ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪುತ್ತೂರು, ಕಡಬ ತಾಲೂಕಿನ ಸಾಧಕರು ಆಯ್ಕೆ



ಪುತ್ತೂರು:2023ನೇ ಸಾಲಿನ ದ.ಕ.ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಿಂದ ಒಟ್ಟು 46 ಮಂದಿ ಸಾಧಕರನ್ನು ವೈಯಕ್ತಿಕ ವಿಭಾಗದಲ್ಲಿ ಆಯ್ಕೆ ಮಾಡಲಾಗಿದ್ದು ಪುತ್ತೂರು, ಕಡಬದಿಂದಲೂ ಕೆಲವು ಸಾಧಕರು ಆಯ್ಕೆಯಾಗಿದ್ದಾರೆ. ಸಂಘ ಸಂಸ್ಥೆಗಳ ವಿಭಾಗದಲ್ಲಿ ಜಿಲ್ಲೆಯ 17 ಸಂಘ ಸಂಸ್ಥೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.


ವೈಯಕ್ತಿಕ ವಿಭಾಗದಲ್ಲಿ ಜಾನಪದ ಕ್ಷೇತ್ರದಲ್ಲಿ ಡಾ|ರವೀಶ್ ಪರವ ಪಡುಮಲೆ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಹಿರಿಯ ಫೊಟೋ ಜರ್ನಲಿಸ್ಟ್ ಪೆರ್ಲಂಪಾಡಿ ಮೂಲದ ರವಿ ಪೊಸವಣಿಕೆ, ವಾರ್ತಾಭಾರತಿ ಹಿರಿಯ ವರದಿಗಾರ ಇಬ್ರಾಹಿಂ ಅಡ್ಕಸ್ಥಳ, ಸಮಾಜ ಸೇವೆ ಕ್ಷೇತ್ರದಿಂದ ಕೆ.ಪಿ.ಅಹಮ್ಮದ್ ಹಾಜಿ, ಚಾರ್ವಾಕ ಸಿಎ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ, ಆರ್ಯಾಪು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು,ಕೃಷಿ ಕ್ಷೇತ್ರದಿಂದ ಪ್ರಗತಿಪರ ಕೃಷಿಕ ಮತ್ತು ಕಂಬಳ ಕ್ಷೇತ್ರದಲ್ಲಿಯೂ ಸಕ್ರಿಯರಾಗಿ ತೊಡಗಿಸಿಕೊಂಡಿರುವ ಕೇಶವ ಭಂಡಾರಿ ಕೈಪ, ದೈವಾರಾಧನೆ ಮತ್ತು ಜಾನಪದ ಸಾಹಿತ್ಯ ಕ್ಷೇತ್ರದಿಂದ ದೈವದ ಮಧ್ಯಸ್ಥ ಮತ್ತು ಕಾರ‍್ಯಕ್ರಮ ನಿರೂಪಕ ಮನ್ಮಥ ಜೆ.ಶೆಟ್ಟಿ ಹಾಗೂ ಕಲಾ ಕ್ಷೇತ್ರದಿಂದ ನಾಟಕ ಕಲಾವಿದ ಎ.ಎಸ್.ದಯಾನಂದ ಕುಂತೂರು ಅವರನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!