ಅಮ್ಚಿನಡ್ಕ: ವಿವಾಹಿತ ಮಹಿಳೆ ಆಯಿಷಾ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ- ಪತಿ ವಿರುದ್ದ ದೂರು
ಪುತ್ತೂರು: ಮಹಿಳೆಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಡ್ನೂರು ಗ್ರಾಮದ ಕಾವು ಮುಖಾರಿಮೂಲೆ ಎಂಬಲ್ಲಿಂದ ವರದಿಯಾಗಿದ್ದು ಮುಖಾರಿಮೂಲೆ ಜೈನುದ್ದೀನ್ ಎಂಬವರ ಪುತ್ರಿ ಆಯಿಷಾ (31.ವ)ರವರು ಆತ್ಮಹತ್ಯೆ ಮಾಡಿಕೊಂಡವರು.
ಆಯಿಷಾರವರನ್ನು ವಳಾಲಿನ ಸಲೀಂ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ಸಲೀಂರವರು ಬೆಂಗಳೂರಿನಲ್ಲಿ ಸೂಪರ್ ಮಾರ್ಕೆಟ್‌ನಲ್ಲಿ ಕೆಲಸ ಮಾಡಿಕೊಂಡಿದ್ದು ಆಯಿಷಾರವರು ಒಂದು ತಿಂಗಳ ಹಿಂದೆ ತನ್ನ ತಂದೆಯ ಮನೆಗೆ ಬಂದಿದ್ದರು ಎನ್ನಲಾಗಿದೆ. ಈ ಸಾವಿಗೆ ಆಯಿಷಾಳ ಗಂಡ ಮಾನಸಿಕ, ದೈಹಿಕ ಕಿರುಕುಳ ಹಿಂಸೆ ನೀಡಿದ್ದೇ ಕಾರಣವಾಗಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಯಿಷಾಳ ತಂದೆ ಜೈನುದ್ದೀನ್‌ರವರು ದೂರಿನಲ್ಲಿ ತಿಳಿಸಿದ್ದಾರೆ.
ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಠಾಣಾ ಉಪ ನಿರೀಕ್ಷಕ ಧನಂಜಯ ಬಿ.ಸಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.