ಸುಳ್ಯ: ಎನ್ ಲೈಟ್ ಅಕಾಡೆಮಿ ವತಿಯಿಂದ ಗಾಂಧಿನಗರ ಮದರಸ ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ತರಬೇತಿ ಶಿಬಿರ
ಸುಳ್ಯ ಗಾಂಧಿನಗರ ಮುನವ್ವರುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ಎನ್ ಲೈಟ್ ಅಕಾಡೆಮಿ ಸುಳ್ಯ ಇದರ ವತಿಯಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ತರಬೇತಿ ಶಿಬಿರ ಜ.8 ರಂದು ನಡೆಯಿತು.
ತರಬೇತಿ ಶಿಬಿರವನ್ನು ಗಾಂಧಿನಗರ ಕೇಂದ್ರ ಜುಮ್ಮಾ ಮಸೀದಿ ಖತೀಬರಾದ ಅಲ್ ಹಾಜ್ ಅಶ್ರಫ್ ಕಾಮಿಲ್ ಸಖಾಫಿ ದುವಾ ನೆರವೇರಿಸಿ ಉದ್ಘಾಟಿಸಿದರು
ಗಾಂಧಿನಗರ ಜುಮ್ಮಾಮಸ್ಜಿದ್ ಇದರ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಕೆ.ಎಂ ಮುಸ್ತಫಾ, ಹಾಗೂ ಸಮಿತಿ ನಿರ್ದೇಶಕ ನಗರ ಪಂಚಾಯತ್ ಸದಸ್ಯ ಉಮ್ಮರ್ ಕೆ ಎಸ್ ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
ಜಮಾಅತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಕೆ ಬಿ ಮಜೀದ್, ನಿರ್ದೇಶಕರಾದ ಹಾಜಿ ಹಮೀದ್ , ಇಬ್ರಾಹಿಂ ಶಿಲ್ಪ, ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕ್ಕಾರ್, ಸ್ಥಳೀಯ ಮುಖಂಡರಾದ ಸಿದ್ದೀಕ್ ಕಟ್ಟೆಕ್ಕಾರ್, ಹಾಜಿ ಐ ಇಸ್ಮಾಯಿಲ್, ರಜ್ಜು ಭಯ್ಯಾ, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಗಾರದಲ್ಲಿ ತರಬೇತಿ ನೀಡಿದ ರಾಜ್ಯಮಟ್ಟದ ತರಬೇತುದಾರ ರಫೀಕ್ ಮಾಸ್ಟರ್ ‘ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ವಿದ್ಯಾರ್ಥಿ ಜೀವನ ಹೇಗೆ ಮುನ್ನಡಿಸಬೇಕು ಹೇಗೆ ಜೀವನ ನಡೆಸಿದರೆ ಯಶಸ್ಸಿನ ಗುರಿಮುಟ್ಟಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಸವಿವರವಾಗಿ ತರಬೇತಿ ನೀಡಿದರು.
ತಾಲೂಕಿನ ವಿವಿಧ ಭಾಗಗಳಿಂದ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಎನ್ ಲೈಟ್ ಸದಸ್ಯ ಕಮಾಲ್ ಎ ಬಿ ಸ್ವಾಗತಿಸಿ. ಆಶಿಕ್ ಸುಳ್ಯ,ಸಿರಾಜುದ್ದೀನ್ ಪ್ಯಾನ್ಸಿ, ಆಶಿಫ್ ಪನ್ನೆ,ಮಶೂದ್ ಮಚ್ಚು,ಅಬ್ದುಲ್ ಮುಜೀಬ್ ಕೆ ಬಿ,ಸಾದಿಕ್ ಮಾಸ್ಟರ್, ನಿಜಾರ್ ಅಂಜಿಕ್ಕಾರ್,ಅಬ್ದುಲ್ ರವೂಪ್, ಕಾರ್ಯಕ್ರಮ ನಿರೂಪಿಸಿದರು.