ಜಿಲ್ಲೆ

ಮಡಿಕೇರಿ: ತಾಂತ್ರಿಕ ದೋಷದಿಂದ ನಿಯಂತ್ರಣ ತಪ್ಪಿ ರಸ್ತೆಗೆ ಅಪ್ಪಳಿಸಿದ ಗ್ಲೈಡರ್

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ತಾಂತ್ರಿಕ ದೋಷದಿಂದ ತುರ್ತು ಭೂ ಸ್ಪರ್ಶ ಮಾಡಿದ ಪ್ಯಾರಾ ಗ್ಲೆಂಡರ್ ಅಪಘಾತ ಕೀಡಾದ ಘಟನೆ ವರದಿಯಾಗಿದೆ. ಪೊನ್ನಂಪೇಟೆ ನಿವಾಸಿ

Read More
ಕರಾವಳಿ

ಸುಳ್ಯ: ಕಲ್ಲುಗುಂಡಿ ಸಮೀಪ ಆಟೋ ಪಲ್ಟಿಯಾದ ವೇಳೆ ವೃದ್ದ ಪ್ರಯಾಣಿಕನನ್ನು ಉಪಚರಿಸದೆ ಅಲ್ಲೇ ಬಿಟ್ಟು ಹೋದ ಆಟೋ ಚಾಲಕ..! ಸ್ವಲ್ಪ ದೂರ ಚಲಿಸಿದ ಬಳಿಕ ಮತ್ತೆ ಅಪಘಾತಕ್ಕೊಳಗಾದ ಆಟೋ ರಿಕ್ಷಾ

ಕಲ್ಲುಗುಂಡಿ ಸಮೀಪ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾದ ವೇಳೆ ಅದರೊಳಗಿದ್ದ ವೃದ್ದ ಪ್ರಯಾಣಿಕನನ್ನು ಉಪಚರಿಸದೆ ಆಟೋ ಚಾಲಕ ಅಲ್ಲೇ ಬಿಟ್ಟು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಕಲ್ಲುಗುಂಡಿ

Read More
ಕರಾವಳಿಕ್ರೈಂ

ಯುವತಿಯ ಮಾನ ಭಂಗಯತ್ನ ಪ್ರಕರಣ: ಆರೋಪಿಯ ಮಧ್ಯಂತರ ಜಾಮೀನು ಅರ್ಜಿ ವಜಾಗೊಳಿಸಿ ನ್ಯಾಯಾಂಗ ಬಂಧನ ವಿಧಿಸಿದ ಮಂಗಳೂರು ನ್ಯಾಯಾಲಯ

ಬಜಪೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಗಂಜಿ ಮಠ ಕೈಗಾರಿಕಾ ಪ್ರದೇಶದಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಯುವತಿಯನ್ನು ಬೈಕಿನಲ್ಲಿ ಬಂದು ಬೆನ್ನಟ್ಟಿ ಅಸಹ್ಯವಾಗಿ ಸನ್ನೆ ಮಾಡಿ ಕೈ ಹಿಡಿದು ಎಳೆದಾಡಿ

Read More
ಕರಾವಳಿ

ಪುತ್ತೂರು: ಯುವ ವಕೀಲ ಮುಂಡೋಳೆಯ ತ್ವಾಹಾ ಖಲೀಲ್ ನ್ಯಾಯಾಧೀಶರಾಗಿ ನೇಮಕ

ಪುತ್ತೂರು: ತಾಲೂಕಿನ ಬಡಗನ್ನೂರು ಗ್ರಾಮದ ಮುಂಡೋಳೆ ನಿವಾಸಿ ವಕೀಲರಾಗಿದ್ದ ತ್ವಾಹಾ ಖಲೀಲ್ ರವರು ಕೆ ಎ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ವಕೀಲ

Read More
ರಾಜಕೀಯರಾಜ್ಯರಾಷ್ಟ್ರೀಯ

ಕಾಂಗ್ರೆಸ್ ನಿಂದ ಇನ್ನೊಂದು ಆಫರ್: ರೂ.500ಕ್ಕೆ ಗ್ಯಾಸ್

ಮುಂದಿನ ಕರ್ನಾಟಕ ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತೀ ಮನೆಗೂ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದು ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ.  ಇದೀಗ ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ರಾಹುಲ್ ಗಾಂಧಿಯವರು ರೂ.500ಕ್ಕೆ ಗ್ಯಾಸ್ ಸಿಲಿಂಡರ್ ಮತ್ತು ಅಗ್ಗದ ದರಕ್ಕೆ ಪೆಟ್ರೋಲ್, ಡೀಸೆಲ್ ಹಾಗೂ ಯುವಕರಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ. ಬೆಲೆಯೇರಿಕೆಯನ್ನೇ ಪ್ರಮುಖ ವಿಚಾರವನ್ನಾಗಿಸಿಕೊಂಡಿರುವ ಕಾಂಗ್ರೆಸ್ ಜನತೆಗೆ ಆಫರ್‌ಗಳ ಮೇಲೆ ಆಫರ್ ನೀಡುತ್ತಿದ್ದು ಚುನಾವಣೆ ಸಮೀಪಿಸುತ್ತಿರುವ ವೇಳೆ ಇನ್ನಷ್ಟು ಆಫರ್‌ನ್ನು ಘೋಷಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಬಿಜೆಪಿ ದುರಾಡಳಿತದಿಂದ ಜನತೆ ಬೇಸತ್ತಿದ್ದು ಕಾಂಗ್ರೆಸ್ ಪಕ್ಷಕ್ಕೆ ಜನತೆ ಆಶೀರ್ವಾದ ಮಾಡುತ್ತಾರೆ ಎನ್ನುವ ವಿಶ್ವಾಸದಿಂದ ಕಾಂಗ್ರೆಸ್ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಂಡು ಈ ಹಿಂದೆಂದಿಗಿಂತಲೂ ಹೆಚ್ಚು ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಿರುವ ಹಿನ್ನೆಲೆಯಲ್ಲಿ ಈ ಬಾರಿಯ ಘೋಷಣೆಯನ್ನೂ ಖಂಡಿತಾ ಈಡೇರಿಸುತ್ತಾರೆ, ಅದರಲ್ಲಿ ಅನುಮಾನ ಬೇಡ ಎಂದು ಕಾಂಗ್ರೆಸ್‌ನ ಸ್ಥಳೀಯ ಮಟ್ಟದ ನಾಯಕರು ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳು ವಿವಿಧ ಕಸರತ್ತು ನಡೆಸುತ್ತಿದ್ದು ಅಂತಿಮವಾಗಿ ಜನರು ಯಾರಿಗೆ ಆಶೀರ್ವಾದ ಮಾಡುತ್ತಾರೆ ಎಂದುಕಾದು ನೋಡಬೇಕಿದೆ.

Read More
Uncategorized

ಮದುವೆಯ ಸಂಭ್ರಮದಲ್ಲಿದ್ದ ಯುವತಿ ಕುಸಿದು ಬಿದ್ದು ಸಾವು

ಮದುವೆಯ ಮುನ್ನಾ ದಿನ ವಧುವೊಬ್ಬಳು ಕುಸಿದು ಬಿದ್ದುಮೃತಪಟ್ಟಿರುವ ಘಟನೆ ಮಲಪ್ಪುರಂನ ಪೆರಿಂತಲ್ಮನ್ನಾದಲ್ಲಿ ಜ.13 ರಂದು ನಡೆದಿದೆ. ಪಾತೈಕ್ಕರ ಶಾಲೆಪಾಡಿ  ಮುಸ್ತಫಾ ಮತ್ತು ಝೀನತ್ ದಂಪತಿ ಪುತ್ರಿ ಫಾತಿಮಾ ಬಾತೂರ್ (19.ವ) ಮೃತ ಯುವತಿ. ಫಾತಿಮಾ ಅವರ ಮದುವೆ  ಜ.14ರಂದು ನಡೆಯಬೇಕಾಗಿದ್ದು ಅದಕ್ಕೆ ಮನೆಯವರು ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿದ್ದರು. ಜ.13ರಂದು ಸಂಜೆ ಮೆಹಂದಿ ಏರ್ಪಡಿಸಲಾಗಿತ್ತು. ಮೆಹಂದಿ ಸಂಭ್ರಮದ ಮಧ್ಯೆ ಫಾತಿಮಾ ಏಕಾಏಕಿ ಕುಸಿದು ಬಿದ್ದಿದ್ದಾರೆ. ಈ ವೇಳೆ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಮೃತಪಟ್ಟಿದ್ದರು ಎಂದು ವೈದ್ಯರು ದೃಢೀಕರಿಸಿದ್ದಾರೆ. ಮದುವೆಯ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು ಮನೆಯವರ ರೋದನ ಮುಗಿಲು ಮುಟ್ಟಿದೆ.ಸ್ಥಳಕ್ಕೆ ನೂರಾರು ಮಂದಿ ಭೇಟಿ ನೀಡಿದ್ದಾರೆ.

Read More
ಕರಾವಳಿ

ಪುತ್ತೂರು: ಸಂಪ್ಯದಲ್ಲಿ ರಿಕ್ಷಾ ಪಲ್ಟಿ

ಪುತ್ತೂರು: ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶನಿವಾರ ಮದ್ಯಾಹ್ನ ಸಂಪ್ಯದಲ್ಲಿ ನಡೆದಿದೆ. ಸಂಪ್ಯ ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಆಟೋ ರಿಕ್ಷಾ ಸಂಪ್ಯ ಅಕ್ಷಯ ಕಾಲೇಜು ಬಳಿ ರಸ್ತೆ ಮಧ್ಯೆ ಪಲ್ಟಿಯಾಗಿದ್ದು ರಿಕ್ಷಾದ ಎದುರು ಚಲಿಸುತ್ತಿದ್ದ ಕಾರಿನ ಚಾಲಕ ಹಠಾತ್ ಬ್ರೇಕ್ ಹಾಕಿದ್ದು ಈ ವೇಳೆ ರಿಕ್ಷಾ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದು ಈ ವೇಳೆ ರಿಕ್ಷಾ ಪಲ್ಟಿಯಾಗಿದೆ.  ರಿಕ್ಷಾದಲ್ಲಿ ಇಬ್ಬರು ಪ್ರಯಾಣಿಕರು ಇದ್ದರಾರದೂ ಚಾಲಕ ಮತ್ತು ಪ್ರಯಾಣಿಕರು ಯಾವುದೇ ಅಪಾಯಗಳಿಲ್ಲದೇ ಪಾರಾಗಿದ್ದಾರೆ. ಘಟನೆಯಿಂದ ರಿಕ್ಷಾಗೆ ಹಾನಿಯಾಗಿದೆ.

Read More
ಕರಾವಳಿರಾಜಕೀಯ

ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಚುನಾವಣಾ ಪೂರ್ವಭಾವಿ ಸಭೆ

ಪುತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್ ಅಧ್ಯಕ್ಷತೆಯಲ್ಲಿ ಚುನಾವಣಾ ಪೂರ್ವ ಬಾವಿ ಸಭೆಯು ಪಕ್ಷದ

Read More
ಜಿಲ್ಲೆ

ಮಡಿಕೇರಿ :ಕಾಡಾನೆ ಸೆರೆ ಹಿಡಿಯಲು ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ : ಕಾಡಾನೆ ಸಾವು

ಕುಶಾಲನಗರ ಮಡಿಕೇರಿ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಕಾಣಿಸುತ್ತಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ವತಿಯಿಂದ ಸೆರೆ ಹಿಡಿಯಲು ನಡೆಸಿದ ಕಾರ್ಯಾಚರಣೆ ವೇಳೆ 35 ಅಡಿ ಆಳಕ್ಕೆ ಬಿದ್ದು

Read More
ರಾಜಕೀಯರಾಷ್ಟ್ರೀಯ

2024ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಹುಮತ ಕಳೆದುಕೊಳ್ಳಲಿದೆ: ಶಶಿ ತರೂರ್

2024ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಹುಮತ ಕಳೆದುಕೊಳ್ಳಲಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ. ಕೇರಳ ಸಾಹಿತೋತ್ಸವದಲ್ಲಿ ಮಾತನಾಡಿದ ಅವರು, 2019ರ ಗೆಲುವು

Read More
error: Content is protected !!