ರಾಜಕೀಯರಾಷ್ಟ್ರೀಯ

2024ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಹುಮತ ಕಳೆದುಕೊಳ್ಳಲಿದೆ: ಶಶಿ ತರೂರ್



2024ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಹುಮತ ಕಳೆದುಕೊಳ್ಳಲಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.

ಕೇರಳ ಸಾಹಿತೋತ್ಸವದಲ್ಲಿ ಮಾತನಾಡಿದ ಅವರು, 2019ರ ಗೆಲುವು ಮತ್ತೆ ಸಾಧಿಸುವುದು ಬಿಜೆಪಿ ಪಾಲಿಗೆ ಕಷ್ಟ ಎಂದು ಹೇಳಿದರು.

ಕಳೆದ ಚುನಾವಣೆಯಲ್ಲಿ ಪುಲ್ವಾಮ ಮತ್ತು ಬಾಲಾಕೋಟ್ ದಾಳಿಯಂತಹ ಘಟನೆಗಳು ಕೊನೆಯ ಕ್ಷಣದಲ್ಲಿ ಬಿಜೆಪಿಗೆ ನೆರವಾಗಿ ಪರಿಣಮಿಸಿತ್ತು. ಆದರೆ 2024ರಲ್ಲಿ ಪರಿಸ್ಥಿತಿ ಭಿನ್ನವಾಗಿರಲಿದೆ, ಈಗಾಗಲೇ ಅನೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!