ಸುಳ್ಯ: ಕಲ್ಲುಗುಂಡಿ ಸಮೀಪ ಆಟೋ ಪಲ್ಟಿಯಾದ ವೇಳೆ ವೃದ್ದ ಪ್ರಯಾಣಿಕನನ್ನು ಉಪಚರಿಸದೆ ಅಲ್ಲೇ ಬಿಟ್ಟು ಹೋದ ಆಟೋ ಚಾಲಕ..! ಸ್ವಲ್ಪ ದೂರ ಚಲಿಸಿದ ಬಳಿಕ ಮತ್ತೆ ಅಪಘಾತಕ್ಕೊಳಗಾದ ಆಟೋ ರಿಕ್ಷಾ
ಕಲ್ಲುಗುಂಡಿ ಸಮೀಪ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾದ ವೇಳೆ ಅದರೊಳಗಿದ್ದ ವೃದ್ದ ಪ್ರಯಾಣಿಕನನ್ನು ಉಪಚರಿಸದೆ ಆಟೋ ಚಾಲಕ ಅಲ್ಲೇ ಬಿಟ್ಟು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಕಲ್ಲುಗುಂಡಿ ಸಮೀಪದ ಕಡೆಪಾಲದಲ್ಲಿ ಜನವರಿ 13ರಂದು ತಡರಾತ್ರಿ ಈ ಘಟನೆ ನಡೆದಿದ್ದು ಆಟೋ ಪಲ್ಟಿಯಾದ ರಭಸಕ್ಕೆ ಮರ್ಕಂಜ ಗ್ರಾಮದ ವೃದ್ದ ಪ್ರಯಾಣಿಕ ತೀವ್ರ ಗಾಯಗೊಂಡು ಅಲ್ಲೇ ಬಿದ್ದಿದರು ಎನ್ನಲಾಗಿದೆ.
ಆದರೆ ಆಟೋ ಚಾಲಕ ಅವರನ್ನು ಲೆಕ್ಕಿಸದೆ ಅಲ್ಲಿಂದ ತೆರಳಿದ್ದು ಸ್ಥಳೀಯರ ಸಹಕಾರದಿಂದ ಆಂಬ್ಯುಲೆನ್ಸ್ ಮೂಲಕ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ವೃದ್ಧರನ್ನು ದಾಖಲಿಸಲಾಗಿದೆ ಎನ್ನಲಾಗಿದೆ.
ಪ್ರಯಾಣಿಕನನ್ನು ಉಪಚರಿಸದೆ ಮುಂದೆ ಸಾಗಿದ ಆಟೋ ಚಾಲಕ ಮತ್ತೆ ಕಂಟಕ ಎದುರಾಗಿದ್ದು ಪೆರಾಜೆ ಬಳಿ ತಲುಪುತ್ತಿದ್ದಂತೆ ಆಟೋ ಮಗದೊಮ್ಮೆ ಪಲ್ಟಿಯಾಗಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಕಲ್ಲುಗುಂಡಿ ಹೊರ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.