ಪುತ್ತೂರು: ಸಂಪ್ಯದಲ್ಲಿ ರಿಕ್ಷಾ ಪಲ್ಟಿ
ಪುತ್ತೂರು: ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶನಿವಾರ ಮದ್ಯಾಹ್ನ ಸಂಪ್ಯದಲ್ಲಿ ನಡೆದಿದೆ.

ಸಂಪ್ಯ ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಆಟೋ ರಿಕ್ಷಾ ಸಂಪ್ಯ ಅಕ್ಷಯ ಕಾಲೇಜು ಬಳಿ ರಸ್ತೆ ಮಧ್ಯೆ ಪಲ್ಟಿಯಾಗಿದ್ದು ರಿಕ್ಷಾದ ಎದುರು ಚಲಿಸುತ್ತಿದ್ದ ಕಾರಿನ ಚಾಲಕ ಹಠಾತ್ ಬ್ರೇಕ್ ಹಾಕಿದ್ದು ಈ ವೇಳೆ ರಿಕ್ಷಾ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದು ಈ ವೇಳೆ ರಿಕ್ಷಾ ಪಲ್ಟಿಯಾಗಿದೆ.
ರಿಕ್ಷಾದಲ್ಲಿ ಇಬ್ಬರು ಪ್ರಯಾಣಿಕರು ಇದ್ದರಾರದೂ ಚಾಲಕ ಮತ್ತು ಪ್ರಯಾಣಿಕರು ಯಾವುದೇ ಅಪಾಯಗಳಿಲ್ಲದೇ ಪಾರಾಗಿದ್ದಾರೆ. ಘಟನೆಯಿಂದ ರಿಕ್ಷಾಗೆ ಹಾನಿಯಾಗಿದೆ.