ಮಡಿಕೇರಿ: ತಾಂತ್ರಿಕ ದೋಷದಿಂದ ನಿಯಂತ್ರಣ ತಪ್ಪಿ ರಸ್ತೆಗೆ ಅಪ್ಪಳಿಸಿದ ಗ್ಲೈಡರ್
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ತಾಂತ್ರಿಕ ದೋಷದಿಂದ ತುರ್ತು ಭೂ ಸ್ಪರ್ಶ ಮಾಡಿದ ಪ್ಯಾರಾ ಗ್ಲೆಂಡರ್ ಅಪಘಾತ ಕೀಡಾದ ಘಟನೆ ವರದಿಯಾಗಿದೆ.


ಪೊನ್ನಂಪೇಟೆ ನಿವಾಸಿ ಮುತ್ತಣ್ಣ ಎಂಬುವರಿಗೆ ಸೇರಿದ 2 ಸೀಟರ್ ಗ್ಲೈಡರ್ ಹಾರಾಟದ ಸಂದರ್ಭದಲ್ಲಿ ತಾಂತ್ರಿಕ ದೋಷ ಉಂಟಾಗಿ ಪೈಲೆಟ್ ಗ್ರೈಂಡರನ್ನು ಭೂ ಸ್ಪರ್ಶಕ್ಕೆ ಮುಂದಾದಾಗ ನಿಟ್ಟೂರು ಗ್ರಾಮದ ಲಕ್ಷ್ಮಣ ತೀರ್ಥ ನದಿ ಸೇತುವೆ ಬಳಿ ಅಪಘಾತ ಸಂಭವಿಸಿದೆ.
ಘಟನೆಯಿಂದ ಪೈಲೆಟ್ ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದು ಸ್ಥಳಕ್ಕೆ ಪೊನ್ನಂಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





