Author: news_bites_admin

ಕರಾವಳಿ

ಪ್ರತಿಷ್ಠಿತ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಸದಸ್ಯರಾಗಿ ಮಹಮ್ಮದ್ ಕುಕ್ಕುವಳ್ಳಿ ಆಯ್ಕೆ

ಪುತ್ತೂರು: ಉದ್ಯಮಿ, ಸಮಾಜ ಸೇವಕ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಅವರು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅನೇಕ ಸಂಘ ಸಂಸ್ಥೆಗಳಲ್ಲಿ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಅವರಿಗೆ ಇದೀಗ ಮತ್ತೊಂದು ಗೌರವದ ಸ್ಥಾನಮಾನ ಸಿಕ್ಕಿದಂತಾಗಿದೆ. ‘ಸೂರಿಲ್ಲದವರಿಗೊಂದು ಆಸರೆ’ ಎನ್ನುವ ಸಂಸ್ಥೆ ಕಟ್ಟಿಕೊಂಡು ಸುಮಾರು 70ಕ್ಕೂ ಅಧಿಕ ಬಡ ಕುಟುಂಬಳಿಗೆ ಸೂರು ಹಾಗೂ ಮೇಲ್ಛಾವಣಿ ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಮಹಮ್ಮದ್ ಹಾಜಿ ಕುಕ್ಕುವಳ್ಳಿಯವರು ಬಡವರ ಪರವಾದ ಸೇವಾ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ದ.ಕ ಜಿಲ್ಲಾಧ್ಯಕ್ಷರಾಗಿರುವ ಇವರು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ತಾವು ಸಮಾಜಪರವಾಗಿ ಸಲ್ಲಿಸಿರುವ ಸೇವೆ ಅನೇಕ ಪ್ರಶಸ್ತಿಗಳನ್ನು ಕೂಡಾ ಪಡೆದುಕೊಂಡಿದ್ದಾರೆ. ಇವರು ದಿ.ಯೂಸುಫ್ ಮತ್ತು ಮರಿಯಮ್ಮ ದಂಪತಿಯ ಪುತ್ರ.

Read More
ರಾಜಕೀಯರಾಜ್ಯ

ರೈತರಿಗೆ 7 ಗಂಟೆ ವಿದ್ಯುತ್ ನೀಡದಿದ್ದರೆ ವಿದ್ಯುತ್ ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟನೆ : ಬೊಮ್ಮಾಯಿ

ರಾಜ್ಯ ಸರ್ಕಾರ ರೈತರಿಗೆ ಏಳು ಗಂಟೆ ಥ್ರಿಫೆಸ್ ವಿದ್ಯುತ್ ನೀಡದಿದ್ದರೆ, ವಿದ್ಯುತ್ ‌ಕಚೇರಿಗಳಿಗೆ ಬೀಗ ಹಾಕಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

Read More
ರಾಷ್ಟ್ರೀಯ

ಬಿಹಾರ: ಹಳಿ ತಪ್ಪಿದ ನಾರ್ತ್ ಈಸ್ಟ್ ಸೂಪರ್ಫಾಸ್ಟ್ ರೈಲು- ನಾಲ್ವರು ಸಾವು, ಹಲವರಿಗೆ ಗಾಯ

ಬಿಹಾರ: ಬಕ್ಸರ್ ಜಿಲ್ಲೆಯ ರಘುನಾಥಪುರ ರೈಲು ನಿಲ್ದಾಣದ ಸಮೀಪ ಅ. 11ರಂದು ರಾತ್ರಿ ನಾರ್ತ್ ಈಸ್ಟ್ ಸೂಪರ್ಫಾಸ್ಟ್ ರೈಲಿನ ಹಲವು ಬೋಗಿಗಳು ಹಳಿತಪ್ಪಿದ್ದು, ಅಪಘಾತದಲ್ಲಿ ನಾಲ್ವರು ಪ್ರಯಾಣಿಕರು

Read More
ರಾಜ್ಯ

ಬೆಂಗಳೂರು ಅತ್ತಿಬೆಲೆ ಪಟಾಕಿ ದುರಂತ: ನಾಲ್ವರು ಅಧಿಕಾರಿ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಸರಕಾರ ಆದೇಶ

ಬೆಂಗಳೂರು: ಅತ್ತಿಬೆಲೆ ಪಟಾಕಿ ದುರಂತದ ಹಿನ್ನಲೆಯಲ್ಲಿ ಆನೇಕಲ್ ತಹಶೀಲ್ದಾರ್(ಹಿಂದಿನ) ಶಶಿಧರ ಮಾಡ್ಯಾಳ್ ಸೇರಿದಂತೆ ನಾಲ್ವರು ಅಧಿಕಾರಿ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಬೆಂಗಳೂರು

Read More
ಕರಾವಳಿ

ಪುತ್ತೂರು ಕಲ್ಲಿಮಾರ್‌ನಲ್ಲಿ ಬ್ರೈಟ್ ಭಾರತ್ ಸಂಸ್ಥೆಯ ಕಚೇರಿ ಉದ್ಘಾಟನೆ 

ಪುತ್ತೂರು: ಬಡವರ ಕನಸಿಗೆ ಬೆಳಕಾಗುವ ವಿಶಿಷ್ಟ ಯೋಜನೆಗಳನ್ನೊಳಗೊಂಡ ಬ್ರೈಟ್ ಭಾರತ್ ಸಂಸ್ಥೆಯ ಕಚೇರಿ ಅ.9ರಂದು ಪುತ್ತೂರು ಕಲ್ಲಿಮಾರ್‌ನಲ್ಲಿರುವ ಕೀರ್ತನಾ ಪ್ಯಾರಡೈಸ್‌ನಲ್ಲಿ ಶುಭಾರಂಭಗೊಂಡಿತು. ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಬ್ರೈಟ್ ಭಾರತ್ ಸಂಸ್ಥೆ ಉತ್ತಮ ಕಾರ್ಯಚಟುವಟಿಕೆ ಮೂಲಕ ಯಶಸ್ಸಿನ ಪಥದಲ್ಲಿ ಸಾಗಲಿ ಎಂದು ಹೇಳಿದರು. ಅಝರ್ ಶಾ ಅವರ ಬಗ್ಗೆ ನನಗೆ ಕಳೆದ ಐದು ತಿಂಗಳಿನಿಂದ ಗೊತ್ತಿದೆ. ಒಬ್ಬ ಸಾಹಸಿ ಯುವಕ. ಅಝರ್ ಮತ್ತು ತಂಡದವರು ಉತ್ತಮ ಕಾರ್ಯಚಟುವಟಿಕೆ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದ್ದು ಮುಂದಕ್ಕೂ ಅಂತಹ ಉತ್ತಮ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗಬೇಕು. ಬ್ರೈಟ್ ಭಾರತ್ ಸಂಸ್ಥೆ ಪುತ್ತೂರಿನ ಜನರ ಮನಸ್ಸನ್ನು ಗೆಲ್ಲುವಂತಾಗಲಿ, ಯಶಸ್ಸು ನಿಮ್ಮದಾಗಲಿ ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಆರು ಜನರ ಯುವಕರ ತಂಡ ಸೇರಿಕೊಂಡು ದೊಡ್ಡದಾದ ಯೋಜನೆ ಯೋಚನೆಯೊಂದಿಗೆ ಹೆಜ್ಜೆ ಹಾಕಿದ್ದು ಮೊದಲೇ ಸಮಾಜದಲ್ಲಿ ಇವರು ಗುರುತಿಸಿಕೊಂಡಿರುವ ಕಾರಣ ಇವರು ಹಮ್ಮಿಕೊಂಡಿರುವ ಲಕ್ಕಿ ಸ್ಕೀಂ ಯಶಸ್ವಿವಿಯಾಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು. ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ಆಧುನಿಕ ಜಗತ್ತಿನಲ್ಲಿ ಜನರಿಗೆ ಎಷ್ಟೇ ವ್ಯವಸ್ಥೆಗಳಿದ್ದರೂ ಸಾಕಾಗುವುದಿಲ್ಲ, ಲೈಫ್ ಸ್ಟೈಲ್, ಹೈಫೈ, ಶೋಕಿ ಜೀವನದತ್ತ ಜನರು ಮಾರು ಹೋಗುತ್ತಿರುವ ಸಂದರ್ಭದಲ್ಲಿ ಅವಕಾಶಗಳನ್ನು ಹುಡುಕಿಕೊಂಡು ಹೋಗುವುದು ಹೆಚ್ಚಾಗುತ್ತಿದೆ. ೨೫ ವರ್ಷಗಳ ಹಿಂದೆ ಐಷಾರಾಮಿ ವಸ್ತುವಾಗಿದ್ದ ಬೈಕ್, ಕಾರು ಇಂದು ಅವಶ್ಯಕ ವಸ್ತುವಾಗಿ ಮಾರ್ಪಾಡಾಗಿದೆ ಎಂದರು. ಯುವಕರು ಸೇರಿಕೊಂಡು ಒಳ್ಳೆಯ ಕಾರ್ಯವನ್ನು ಇಲ್ಲೇ ಮಾಡಿದಾಗ ಇಲ್ಲಿ ಒಂದಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ ಮತ್ತು ಸ್ವಾಭಿಮಾನದಿಂದ ಜೀವನ ನಡೆಸಲು ಪ್ರಯತ್ನಿಸಬೇಕು. ಬ್ರೈಟ್ ಭರತ್ ಸಂಸ್ಥೆ ಯಶಸ್ಸಿನ ಪಥದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು. ಜೆಡಿಎಸ್ ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್ ಕಲ್ಲೇಗ ಮಾತನಾಡಿ ಆರು ಮಂದಿ ಯುವಕರು ಸೇರಿಕೊಂಡು ಮಾಡಿರುವ ಬ್ರೈಟ್ ಭಾರತ್ ಎನ್ನುವ ಸಂಸ್ಥೆ ಬೆಳೆಯಬೇಕು. ಮುಂದಾಲೋಚನೆಯೊಂದಿಗೆ ಹೆಜ್ಜೆಯಿಡಿ, ಯಶಸ್ಸು ಖಚಿತ ಎಂದು ಹೇಳಿದರು. ನ್ಯಾಯವಾದಿ, ನೋಟರಿ ನೂರುದ್ದೀನ್ ಸಾಲ್ಮರ ಮಾತನಾಡಿ ಬ್ರೈಟ್ ಭಾರತ್ ಸಂಸ್ಥೆಯವರು ನಂಬಿಕೆ ಉಳಿಸಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಾರೆನ್ನುವ ಭರವಸೆ ನನಗಿದೆ. ಜವಾಬ್ದಾರಿ ತುಸು ಹೆಚ್ಚಿದ್ದು ಅದನ್ನು ನಿಭಾಯಿಸಿಕೊಂಡು ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿ ಎಂದು ಪ್ರೋತ್ಸಾಹದ ಮಾತುಗಳನ್ನಾಡಿದರು. ಪ್ರಾಣಿ ಪ್ರೇಮಿ ರಾಜೇಶ್ ಬನ್ನೂರುರವರಿಗೆ ಸನ್ಮಾನ: ಬೀದಿ ನಾಯಿಗಳಿಗೆ ಹಾಗೂ ಇತರ ಪ್ರಾಣಿಗಳಿಗೆ ದಿನನಿತ್ಯ ಆಹಾರ ನೀಡುತ್ತಿರುವ ಪುರಸಭೆಯ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಅವರನ್ನು ಬ್ರೈಟ್ ಭಾರತ್ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ರಾಜೇಶ್ ಬನ್ನೂರು ಮಾತನಾಡಿ ಪ್ರಕೃತಿಯನ್ನು, ಪ್ರಾಣಿಗಳನ್ನು ನಾವೆಲ್ಲರೂ ಪ್ರೀತಿಸಬೇಕು ಆ ಮೂಲಕ ನಮ್ಮ ಬದುಕನ್ನು ಸಾರ್ಥಕಗೊಳಿಸಬೇಕು ಎಂದರು. ಸಮಾಜ ಸೇವಕರಿಬ್ಬರಿಗೆ ಸನ್ಮಾನ: ರೋಗಿಗಳ ಪಾಲಿನ ಆಪತ್ಭಾಂಧವರಾಗಿ ಗರುತಿಸಿಕೊಂಡಿರುವ ಅಲಿ ಪರ್ಲಡ್ಕ ಮತ್ತು ಇಫಾಝ್ ಬನ್ನೂರು ಅವರನ್ನು ಬ್ರೈಟ್ ಭಾರತ್ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಅಶಕ್ತರಿಗೆ ವ್ಹೀಲ್ ಚೆಯರ್ ವಿತರಣೆ: ಕಾರ್ಯಕ್ರಮದಲ್ಲಿ ಇಬ್ಬರು ಅಶಕ್ತರಿಗೆ ವ್ಹೀಲ್ ಚೆಯರ್ ವಿತರಿಸುವ ಮೂಲಕ ಬ್ರೈಟ್ ಭಾರತ್ ಸಂಸ್ಥೆಯ ಮಾನವೀಯ ಕಳಕಳಿ ಮೆಚ್ಚುಗೆಗೆ ಪಾತ್ರವಾಯಿತು. 6 ಮಂದಿ ಸ್ನೇಹಿತರು ಸೇರಿಕೊಂಡು ಸ್ಥಾಪಿಸಿದ ಸಂಸ್ಥೆ: ಸ್ವಾಗತಿಸಿದ ಬ್ರೈಟ್ ಭಾರತ್ ಸಂಸ್ಥೆಯ ಪಾಲುದಾರ ಅಶ್ರಫ್ ಸವಣೂರು ಮಾತನಾಡಿ ಬ್ರೈಟ್ ಭಾರತ್ ಎನ್ನುವುದು ನಮ್ಮ ಕನಸಿನ ಯೋಜನೆಯಾಗಿದ್ದು ಬೇರೆ ಬೇರೆ ಕ್ಷೇತ್ರದಲ್ಲಿ ಗುರುತಿಸಿಕೊಂಡ ಆರು ಮಂದಿ ಸ್ನೇಹಿತರು ಸೇರಿಕೊಂಡು ಸ್ಥಾಪಿಸಿದ ಸಂಸ್ಥೆಯಾಗಿದೆ. ನಮ್ಮಿಂದ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕೆಂಬ ಕನಸಿನೊಂದಿಗೆ ನಾವು ಸಂಸ್ಥೆಯನ್ನು ಕಟ್ಟಿದ್ದು ಈ ಸಂಸ್ಥೆಯಡಿಯಲ್ಲಿ ಸಿವಿಲ್ ಇಂಜಿನಿಯರ‍್ಸ್, ಬಿಲ್ಡಿಂಗ್ ಕನ್ಸ್ಟ್ರಕ್ಷನ್ಸ್, ಆಪ್ ಡೆವಲಪ್‌ಮೆಂಟ್, ಇವೆಂಟ್ ಮೆನೇಜ್‌ಮೆಂಟ್ ಸೇರಿದಂತೆ ಅನೇಕ ಯೋಜನೆಗಳನ್ನು ಹಾಕಿಕೊಂಡು ಮೂರನೇ ಅತೀ ದೊಡ್ಡ ಪ್ರಾಜೆಕ್ಟ್ ಆಗಿ ನಾಲ್ಕು ಸುಸಜ್ಜಿತ ಮನೆಗಳನ್ನು ಬಂಪರ್ ಬಹುಮಾನವಾಗಿ ಕೊಡುವ  ಸ್ಕೀಂ ಯೋಜನೆ ಕೂಡಾ ಹಮ್ಮಿಕೊಂಡಿದ್ದೇವೆ ಎಂದರು. ನಮ್ಮದು ಲಾಭದ ಉದ್ದೇಶಕ್ಕಿಂತ ಮಿಗಿಲಾಗಿ ಗ್ರಾಹಕರ ನಂಬಿಕೆ ನಮಗೆ ಮುಖ್ಯ ಎನ್ನುವ ಉದ್ದೇಶದೊಂದಿಗೆ ಕಾರ್ಯಚಟುವಟಿಕೆಯನ್ನು ಪ್ರಾರಂಭಿಸಿದ್ದೇವೆ. ನಿಮ್ಮೆಲ್ಲರ ಬೆಂಬಲ, ಪ್ರೋತ್ಸಾಹ, ಸಹಕಾರವನ್ನು ನಾವು ಬಯಸುತ್ತಿದ್ದೇವೆ. ಈಗಾಗಲೇ ಮೂರು ಸಾವಿರಕ್ಕಿಂತಲೂ ಅಧಿಕ ಸದಸ್ಯರು ನಮ್ಮ ಮೇಲೆ ಭರವಸೆಯಿಟ್ಟು ಸದಸ್ಯತ್ವ ಪಡೆದುಕೊಂಡಿದ್ದಾರೆ ನಿಮ್ಮೆಲ್ಲರ ಭರವಸೆಯನ್ನು ಬ್ರೈಟ್ ಭಾರತ್ ಈಡೇರಿಸುತ್ತದೆ ಎಂದು ಅವರು ಹೇಳಿದರು. ಪ್ರಮುಖರಾದ ಎನ್ ಚಂದ್ರಹಾಸ ಶೆಟ್ಟಿ, ಸಚಿನ್‌ರಾಜ್ ಶೆಟ್ಟಿ, ಅಸ್ಗರ್ ಮುಡಿಪು, ನವೀನ್ ಕುಲಾಲ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ನಿಹಾಲ್ ಶೆಟ್ಟಿ ಮೊದಲಾದವರು ಮಾತನಾಡಿ ಬ್ರೈಟ್ ಭಾರತ್ ಸಂಸ್ಥೆಗೆ ಶುಭ ಹಾರೈಸಿದರು. ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಮೋನು ಬಪ್ಪಳಿಗೆ, ಪ್ರಮುಖರಾದ ಬಶೀರ್ ಪರ್ಲಡ್ಕ, ಅನೀಶ್ ಶೆಟ್ಟಿ, ಸಿರಾಜ್ ಕೂರ್ನಡ್ಕ, ಗಣೇಶ್ ಶೆಟ್ಟಿ, ಅನ್ವರ್ ಖಾಸಿಂ, ಶರೀಫ್ ಬಲ್ನಾಡ್, ಮಹಮ್ಮದ್ ಕುಂಞಿ ಬಾಬಾ, ದಾವೂದ್ ತಾಜ್, ಫಾರೂಕ್ ಎಂ.ಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಕಚೇರಿ ಶುಭಾರಂಭ ಪ್ರಯುಕ್ತ ಮೂರು ತಲಾ ಮೂರು ಗೋಲ್ಡ್ ರಿಂಗ್ ಹಾಗೂ ಬಂಪರ್ ಬಹುಮಾನವಾಗಿ ಹೋಂಡಾ ಶೈನ್ ಬೈಕ್‌ನ್ನು ಅದೃಷ್ಟ ಬಹುಮಾನವಾಗಿ ಡ್ರಾ ತೆಗೆಯುವುದಾಗಿ ಘೋಷಿಸಲಾಗಿತ್ತು. ಅದರಂತೆ ಸಭಿಕರ ಸಮ್ಮುಖದಲ್ಲಿ ಅತಿಥಿಗಳು  ಪ್ರಥಮ ಗೋಲ್ಡ್ ರಿಂಗ್‌ಗಾಗಿ ಅದೃಷ್ಟ ಚೀಟಿ ಎತ್ತಿದಾಗ ೪೬೫೭ ನಂಬರ್ ಆತೂರಿನ ಫಾತಿಮಾ ಅಫೀಫಾ ವಿಜೇತರಾದರು. ದ್ವಿತೀಯ ಬಹಮಾನವಾದ ಗೋಲ್ಡ್ ರಿಂಗ್‌ಗಾಗಿ ಅದೃಷ್ಟ ಚೀಟಿ ಎತ್ತಿದಾಗ ೨೯೧೪ ನಂಬರ್ ಮೋಕ್ಷ್ ಪಿ ಕೆಮ್ಮಾಯಿ ವಿಜೇತರಾದರು. ಮೂರನೇ ಬಹುಮಾನವಾದ ಗೋಲ್ಡ್ ರಿಂಗ್‌ಗಾಗಿ ಅದೃಷ್ಟ ಚೀಟಿ ಎತ್ತಿದಾಗ ೪೬೩೫ ವಿ.ಜೆ ಸಾಗರ್ ಬೆಳ್ಳಾರೆ ವಿಜೇತರಾದರು. ಬಂಪರ್ ಬಹುಮಾನವಾಗಿದ್ದ ಹೋಂಡಾ ಶೈನ್‌ಗಾಗಿ ನಡೆದ ಅದೃಷ್ಟ ಚೀಟಿ ಎತ್ತುವಿಕೆಯಲ್ಲಿ ೧೪೬೦ ನಂಬರ್ ಅನ್ವರ್ ಅರಂಬೂರು ಸುಳ್ಯ ಅವರು ಅದೃಷ್ಟಶಾಲಿ ವಿಜೇತರಾದರು. ವಿಜೇತರನ್ನು ಸ್ಥಳದಿಂದಲೇ ಸಂಪರ್ಕಿಸಿ ಮಾಹಿತಿ ನೀಡಲಾಯಿತು. ಪಾಲುದಾರ ಅಝರ್ ಶಾ ಅವರು ಅದೃಷ್ಟ ಡ್ರಾ ಪ್ರಕ್ರಿಯೆಯ ಮಾಹಿತಿ ನೀಡಿದರು. ಗಮನ ಸೆಳೆದ ಸಂಗೀತ ರಸಸಂಜೆ: ಬ್ರೈಟ್ ಭಾರತ್ ಸಂಸ್ಥೆಯ ಉದ್ಘಾಟನೆ ಪ್ರಯುಕ್ತ ಸಂಗೀತ ರಸಮಂಜರಿ ಏರ್ಪಡಿಸಲಾಗಿತ್ತು. ಗಾಯಕರಾದ ಸಮದ್ ಗಡಿಯಾರ್, ಅರ್ಫಾಝ್ ಉಳ್ಳಾಲ್ ಫಾಝಿಲ್ ಪರ್ತಿಪ್ಪಾಡಿ ಅವರ ಗಾಯನ ಗಮನ ಸೆಳೆಯಿತು. ನಮ್ಮ ಟಿವಿಯ ಆಂಕರ್ ಸಿಶಾನ್ ಕೌಡೂರು ಕಾರ್ಯಕ್ರಮ ನಿರೂಪಿಸಿದರು.

Read More
ಕರಾವಳಿ

ಮಂಚಿ ವಲಯ ಮಟ್ಟದ ಕ್ರೀಡಾಕೂಟ: ಮಂಚಿ ಕುಕ್ಕಾಜೆ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

2023-24ನೇ ಶೈಕ್ಷಣಿಕ ವರ್ಷದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟವು ಸರಕಾರಿ ಪ್ರೌಢ ಶಾಲೆ ಮಂಚಿ ಇಲ್ಲಿ ನಡೆಯಿತು. ಕ್ರೀಡಾಕೂಟದಲ್ಲಿ 17ರ ವಯೋಮಿತಿ ಯ ಬಾಲಕಿಯರ ವಿಭಾಗದಲ್ಲಿ

Read More
ರಾಜ್ಯ

ಬೆಂಗಳೂರು‌ ಕಂಬಳ ಅ.11ರಂದು ಕರೆ‌ಮುಹೂರ್ತ: ಡಿಸಿಎಂ ಡಿ ಕೆ ಶಿವಕುಮಾರ್ ರವರಿಗೆ ಆಹ್ವಾನ‌

ಬೆಂಗಳೂರು: ಅ.11ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಬೆಂಗಳೂರು‌ ಕಂಬಳದ ಕರೆ‌ಮುಹೂರ್ತ ನಡೆಯಲಿದ್ದು ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರಿಗೆ ಆಹ್ವಾನ‌ ನೀಡಲಾಯಿತು. ನ.25/26 ರಂದು

Read More
ಕರಾವಳಿ

ಅ.30: ಮಿತ್ತೂರಿನಲ್ಲಿ ಭಾರತ್ ವೆಹಿಕಲ್ ಬಜಾರ್ ಶುಭಾರಂಭ

ಪುತ್ತೂರು: HMS ಗ್ರೂಪ್ಸ್ ನವರ ಉಪಯೋಗಿಸಿದ ಕಾರುಗಳು ಮತ್ತು ಗೂಡ್ಸ್ ವಾಹನಗಳ ಮಾರಾಟ, ಖರೀದಿ ಮತ್ತು ವಿನಿಮಯ ಕೇಂದ್ರ ಕಬಕ ಸಮೀಪದ ಮಿತ್ತೂರು ಮಸೀದಿ ಬಳಿ ಅ.30ರಂದು

Read More
ಅಂತಾರಾಷ್ಟ್ರೀಯರಾಷ್ಟ್ರೀಯ

ಇಸ್ರೇಲ್ ನಲ್ಲಿ ಕೇರಳದ 7000 ಮಂದಿ: ಕೇಂದ್ರಕ್ಕೆ ಪತ್ರ ಬರೆದ ಕೇರಳ ಸಿಎಂ ಪಿಣರಾಯಿ ವಿಜಯನ್

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದು ಇಸ್ರೇಲ್‌ನಲ್ಲಿರುವ ಭಾರತೀಯರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಪ್ರಸ್ತುತ

Read More
ಕರಾವಳಿಕ್ರೈಂ

ಕುರಿಯ: ಆತ್ಮಹತ್ಯೆಗೆ ಶರಣಾದ ದ್ವಿತೀಯ ಪಿಯುಸಿ ವಿದ್ಯಾರ್ಥಿ

ಪುತ್ತೂರು:ಕಾಲೇಜು ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟೆಗೆ ಪುತ್ತೂರು ತಾಲೂಕಿನ ಸಂಪ್ಯ ಠಾಣಾ ವ್ಯಾಪ್ತಿಯ ಕುರಿಯದಿಂದ ವರದಿಯಾಗಿದೆ. ಮೃತ ವಿದ್ಯಾರ್ಥಿಯನ್ನು ಕುರಿಯ ಪಡ್ಪು ನಿವಾಸಿ,ಪುತ್ತೂರು ಫಿಲೋಮಿನಾ

Read More
error: Content is protected !!