ಅಂತಾರಾಷ್ಟ್ರೀಯರಾಷ್ಟ್ರೀಯ

ಇಸ್ರೇಲ್ ನಲ್ಲಿ ಕೇರಳದ 7000 ಮಂದಿ: ಕೇಂದ್ರಕ್ಕೆ ಪತ್ರ ಬರೆದ ಕೇರಳ ಸಿಎಂ ಪಿಣರಾಯಿ ವಿಜಯನ್

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದು ಇಸ್ರೇಲ್‌ನಲ್ಲಿರುವ ಭಾರತೀಯರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಪ್ರಸ್ತುತ ಆ ದೇಶದಲ್ಲಿರುವ 7,000 ಕೇರಳಿಗರನ್ನು ರಕ್ಷಿಸಲು ಕೇಂದ್ರದ ಮಧ್ಯಸ್ಥಿಕೆಯನ್ನು ಕೋರಿದ್ದಾರೆ ಎಂದು ವರದಿಯಾಗಿದೆ.

ಇಸ್ರೇಲ್ ನಲ್ಲಿ ಕೇರಳದ ಸುಮಾರು 7,000 ಮಂದಿ ವಾಸವಿದ್ದು. ಇಸ್ರೇಲ್ ಹಮಾಸ್ ಸಂಘರ್ಷದಿಂದ ನಾಗರಿಕರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ .
ಅಲ್ಲದೆ ಭಾರತದಲ್ಲಿರುವ ಅವರ ಕುಟುಂಬ ಸದಸ್ಯರು ತೀವ್ರ ಆತಂಕದಲ್ಲಿದ್ದಾರೆ. ಹಾಗಾಗಿ ಇಸ್ರೇಲ್‌ನಲ್ಲಿರುವ ನಮ್ಮ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಮಧ್ಯಪ್ರವೇಶಿಸುವಂತೆ ನಾನು ಕೋರುತ್ತೇನೆ ಎಂದು ಪಿಣರಾಯಿ ವಿಜಯನ್ ಪತ್ರ ಬರೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!