ರಾಜ್ಯ

ಬೆಂಗಳೂರು‌ ಕಂಬಳ ಅ.11ರಂದು ಕರೆ‌ಮುಹೂರ್ತ: ಡಿಸಿಎಂ ಡಿ ಕೆ ಶಿವಕುಮಾರ್ ರವರಿಗೆ ಆಹ್ವಾನ‌

ಬೆಂಗಳೂರು: ಅ.11ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಬೆಂಗಳೂರು‌ ಕಂಬಳದ ಕರೆ‌ಮುಹೂರ್ತ ನಡೆಯಲಿದ್ದು ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರಿಗೆ ಆಹ್ವಾನ‌ ನೀಡಲಾಯಿತು.

ನ.25/26 ರಂದು ಬೆಂಗಳೂರು‌ಕಂಬಳ ನಡೆಯಲಿದ್ದು ಕರೆ ಮುಹೂರ್ತ ಕಾರ್ಯಕ್ರಮ ಅ.11 ರಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ.

ಈ ಸಂದರ್ಭದಲ್ಲಿ ಬೆಂಗಳೂರು‌ ಕಂಬಳ ಸಮಿತಿ‌ ಅಧ್ಯಕ್ಷರಾದ ಶಾಸಕ ಅಶೋಕ್ ರೈ, ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ, ಕಾರ್ಯಾಧ್ಯಕ್ಷ ಗುರುಕಿರಣ್, ಉಪಾಧ್ಯಕ್ಷರಾದ ಗುಣರಂಜನ್ ಶೆಟ್ಟಿ ,ಮುರಳೀಧರ್ ರೈ ಮಟಂತಬೆಟ್ಟು ಸಹಿತಿ ಕಂಬಳ ಸಮಿತಿಯ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!