ಪುರುಷರಕಟ್ಟೆ: ಕಿಡ್ನಿ ವೈಫಲ್ಯದಿಂದ ಚಿಕಿತ್ಸೆಯಲ್ಲಿರುವ ಅಂಗಾರ ಮನೆಗೆ ಹೇಮನಾಥ್ ಶೆಟ್ಟಿ ನೇತೃತ್ವದ ಕಾಂಗ್ರೆಸ್ ಮುಖಂಡರ ಭೇಟಿ
ಪುತ್ತೂರು: ಕಿಡ್ನಿ ವೈಫಲ್ಯಕ್ಕೊಳಗಾಗಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪುರುಷರಕಟ್ಟೆ ನಿವಾಸಿ ರಿಕ್ಷಾ ಚಾಲಕ ಅಂಗಾರ ಅವರ ಮನೆಗೆ ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ನೇತೃತ್ವದ ನಿಯೋಗ ಭೇಟಿ ನೀಡಿದ್ದಾರೆ.

ಮನೆಯವರ ಜೊತೆ ಮಾತನಾಡಿದ ಹೇಮನಾಥ ಶೆಟ್ಟಿಯವರು ಆರ್ಥಿಕ ನೆರವು ನೀಡುವ ಬಗ್ಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಇಸಾಕ್ ಸಾಲ್ಮರ, ವೇದನಾಥ ಸುವರ್ಣ, ಪರಮೇಶ್ವರ ಭಂಡಾರಿ, ಮಹಾಲಿಂಗ ನಾಯ್ಕ, ಪ್ರವೀಣ್ ಆಚಾರ್ಯ, ಸಲೀಂ ಪಾಪು, ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.