ಕಟ್ಟತ್ತಾರು: ಕಮ್ಯೂನಿಟಿ ಸೆಂಟರ್ ಸಹಯೋಗದೊಂದಿಗೆ ವಿದ್ಯಾರ್ಥಿಗಳೊಂದಿಗೆ ಸಮಾಲೋಚನಾ ಸಭೆ
ಪುತ್ತೂರು: ಬದ್ರಿಯಾ ಜುಮ್ಮಾ ಮಸ್ಜಿದ್ ಕಟ್ಟತ್ತಾರು ಹಾಗೂ ನುಸ್ರತುಲ್ ಅನಾಂ ಯಂಗ್‌ಮೆನ್ಸ್ ಅಸೋಸಿಯೇಷನ್ ಕಟ್ಟತ್ತಾರು ಇದರ ಜಂಟಿ ಆಶ್ರಯದಲ್ಲಿ ಕಮ್ಯೂನಿಟಿ ಸೆಂಟರ್ ಪುತ್ತೂರು ಇದರ ಸಹಯೋಗದೊಂದಿಗೆ ವಿದ್ಯಾರ್ಥಿಗಳೊಂದಿಗೆ ಸಮಾಲೋಚನಾ ಸಭೆ ಕಟ್ಟತ್ತಾರು ನುಸ್ರತುಲ್ ಇಸ್ಲಾಂ ಮದ್ರಸಾ ಹಾಲ್‌ನಲ್ಲಿ ಜ.15ರಂದು ನಡೆಯಿತು.

ಜಮಾಅತ್ ಕಮಿಟಿ ಅಧ್ಯಕ್ಷ ಪಿ.ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಕಮ್ಯೂನಿಟಿ ಸೆಂಟರ್ ಪುತ್ತೂರು ಇದರ ಕಾರ್ಯದರ್ಶಿ ಹನೀಫ್ ಪುತ್ತೂರು, ಇಮ್ತಿಯಾಝ್ ಪಾರ್ಲೆ, ನಝೀರ್, ಅಶ್ಫಾನ ಹಾಗೂ ನುರಿತ ಕೌನ್ಸಿಲರ್‌ಗಳು ಭಾಗವಹಿಸಿದ್ದರು.
ಸಮಾಲೋಚನಾ ಸಭೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆ, ಉನ್ನತ ವಿದ್ಯಾಭ್ಯಾಸದ ಮಾಹಿತಿ, ಸರಕಾರಿ ಉದ್ಯೋಗ ಮಾಹಿತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಹಿತಿ ಹಾಗೂ ಚರ್ಚೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಸುಮಾರು 45 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಜಮಾಅತ್ ಪ್ರಧಾನ ಕಾರ್ಯದರ್ಶಿ ಸಿ.ಬಿ ಅಬೂಬಕ್ಕರ್, ಸದಸ್ಯರಾದ ಯೂಸುಫ್ ಹಾಜಿ, ಮಾಡಾವು ಜಮಾ ಮಸೀದಿ ಅಧ್ಯಕ್ಷ ಖಾದರ್ ಮುಸ್ಲಿಯಾರ್, ಇಬ್ರಾಹಿಂ ಹಾಜಿ ಅರಿಕ್ಕಿಲ, ಯಂಗ್‌ಮೆನ್ಸ್ ಅಧ್ಯಕ್ಷ ಶಾಕಿರ್ ಕೆ.ಎಂ, ಕಾರ್ಯದರ್ಶಿ ಮುಹ್ಸಿನ್ ಎನ್.ಎಂ, ಸದಸ್ಯರಾದ ರಫೀಕ್ ನಂಜೆ ಉಪಸ್ಥಿತರಿದ್ದರು.