ಸುಬ್ರಹ್ಮಣ್ಯ: ಇಬ್ಬರು ಮಕ್ಕಳು ಮತ್ತು ಪತಿಯನ್ನು ಬಿಟ್ಟು ಪ್ರಿಯಕರನೊಂದಿಗೆ ತೆರಳಿದ್ದ ಗ್ರಾ. ಪಂ ಸದಸ್ಯೆ ಸುಬ್ರಹ್ಮಣ್ಯ ಠಾಣೆಗೆ ಹಾಜರು
ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯೆ ಭಾರತಿ ಮೂಕಮಲೆ ಕಳೆದ ಎರಡು ತಿಂಗಳ ಹಿಂದೆ ಕಾಣೆಯಾಗಿದ್ದರು.
ಬಳಿಕ ಒಂದು ತಿಂಗಳ ಹಿಂದೆ ವಿಡಿಯೋ ಹರಿಯ ಬಿಟ್ಟು ತಾನು ಪ್ರಿಯಕರ ನೊಂದಿಗೆ ಇರುವುದಾಗಿ ತಿಳಿಸಿದ್ದು ತನ್ನನ್ನು ಯಾರೂ ಹುಡುಕಾಡದಂತೆ ಕೇಳಿಕೊಂಡಿದ್ದರು.

ಇಂದು ಭಾರತಿ ಮೂಕಮಲೆ ತನ್ನ ಪ್ರಿಯಕರ ನಂದನ್ ನೊಂದಿಗೆ ನ್ಯಾಯವಾದಿ ಮುಖಾಂತರ ಸುಬ್ರಹ್ಮಣ್ಯ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದು ನಂದನ್ ನೊಂದಿಗೆ ಜೀವನ ಮುಂದುವರೆಸುವ ನಿರ್ಧಾರ ಪ್ರಕಟಿಸಿದ್ದಾರೆ. ಠಾಣೆಯಲ್ಲಿ ತನ್ನ ನಿರ್ಧಾರವನ್ನು ಲಿಖಿತ ರೂಪದಲ್ಲಿ ಬರೆದು ಕೊಟ್ಟು ನಂದನ್ ನೊಂದಿಗೆ ತೆರಳಿದ್ದಾರೆ.
ತನ್ನಿಬ್ಬರು ಸಣ್ಣ ಹೆಣ್ಣು ಮಕ್ಕಳನ್ನು, ಪತಿಯನ್ನು ತೊರೆದು ಎರಡು ತಿಂಗಳ ಹಿಂದೆ ಕಾಣೆಯಾಗಿದ್ದ ಭಾರತಿ ಮತ್ತವರ ಪ್ರಿಯಕರ ನಂದನ್ ಹುಡುಕಾಡಿದರೂ ಸಿಕ್ಕಿರಲಿಲ್ಲ. ಇದಾಗ್ಯೂ ಸುಬ್ರಹ್ಮಣ್ಯ ಪೊಲೀಸರು ಅವರನ್ನು ಹಿಡಿದು ತರುವ ಪ್ರಯತ್ನ ಮಾಡಿದ್ದರು.