ಕ್ರೈಂಜಿಲ್ಲೆ

ಶ್ರೀರಾಮ ಸೇನೆ ಮುಖಂಡನ ಮೇಲೆ ಗುಂಡಿನ ದಾಳಿ ಪ್ರಕರಣ: ಯಾವುದೋ ಸಂಘಟನೆಯ ಕೈವಾಡವಿದೆ-ಪ್ರಮೋದ್ ಮುತಾಲಿಕ್

ಬೆಳಗಾವಿ: ರವಿ ಕೋಕಿತ್ಕರ್ ಮೇಲೆ‌ ನಡೆದ ಗುಂಡಿನ ದಾಳಿ ಪ್ರಕರಣದ ಹಿಂದೆ ಯಾವುದೋ ಸಂಘಟನೆಯ ಕೈವಾಡವಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಚಲಿಸುತ್ತಿದ್ದ ವಾಹನದಲ್ಲಿದ್ದವರ ಮೇಲೆ ಗುಂಡು ಹಾರಿಸಲು ಶಾರ್ಪ್‌ ಶೂಟರ್‌ಗಳಿಗೆ ಮಾತ್ರ ಸಾಧ್ಯ. ಈ ಪ್ರಕರಣದಲ್ಲಿರುವ ಶಾರ್ಪ್‌ಶೂಟರ್ ಯಾರು ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಮುತಾಲಿಕ್ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‌ಆರೋಪಿಗಳು ನಾಲ್ಕೈದು ದಿನಗಳಿಂದ ರವಿಯವರನ್ನು ಹಿಂಬಾಲಿಸಿದ್ದು ನಗರದಲ್ಲಿ ಆಯೋಜಿಸಿದ್ದ ವಿರಾಟ್‌ ಹಿಂದೂ ಸಮಾವೇಶಕ್ಕೆ ಅಡ್ಡಿಪಡಿಸಲು ಈ ರೀತಿ ಕೃತ್ಯವೆಸಗಿರುವ ಸಂಶಯವಿದೆ. ರವಿ ಕೋಕಿತ್ಕರ್‌ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದು, ಘಟನಾ ಸ್ಥಳಕ್ಕೂ ಹೋಗಿ ಬಂದಿದ್ದೇನೆ ಎಂದರು.

Leave a Reply

Your email address will not be published. Required fields are marked *

error: Content is protected !!