ಕಾಲ್ನಡಿಗೆಯಲ್ಲಿ ಹಜ್ ಯಾತ್ರೆಗೆ ತೆರಳಿದ್ದ ಶಿಹಾಬ್‌ಗೆ ವಿಸಾ ಅರ್ಜಿ ತಿರಸ್ಕಾರ: ಹಿಂದಿರುವ ಸತ್ಯವೇನು?
ಶಿಹಾಬ್ ಬಗ್ಗೆ ಪಾಕಿಸ್ಥಾನ ಹೈಕೋರ್ಟ್ ಹೇಳಿರುವುದು ಹೀಗೆ…
ಪಂಜಾಬ್: ಕಾಲ್ನಡಿಗೆಯಲ್ಲಿ ಹಜ್ ಯಾತ್ರೆಗೆ ತೆರಳಿದ್ದ ಮಲಪ್ಪುರಂ ಮೂಲದ ಶಿಹಾಬ್ ಎಂಬವರ ವೀಸಾ ಅರ್ಜಿಯನ್ನು ಪಾಕಿಸ್ತಾನದ ನ್ಯಾಯಾಲಯ ತಿರಸ್ಕರಿಸಿದೆ ಎಂದು ಕೆಲ ಮಾಧ್ಯಮಗಳು ವರದಿ ಪ್ರಕಟಿಸಿದೆ.
ಪಂಜಾಬ್ ನ ವಾಘಾ ಗಡಿಯನ್ನು ತಲುಪಲು ಮಲಪ್ಪುರಂನಿಂದ ಕಾಲ್ನಡಿಗೆಯಲ್ಲಿ 3,000 ಕಿ.ಮೀ ಪ್ರಯಾಣಿಸಿದ ಶಿಹಾಬ್, ವೀಸಾ ಇಲ್ಲದ ಕಾರಣ ಪಾಕಿಸ್ತಾನಕ್ಕೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಪಾಕಿಸ್ತಾನದ ವಲಸೆ ಅಧಿಕಾರಿಗಳು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸದ ಕಾರಣ ಶಿಹಾಬ್ ಕಳೆದ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಗಡಿಯಲ್ಲಿದ್ದಾರೆ.
ಪಾಕಿಸ್ತಾನದ ಪ್ರಜೆ ಸರ್ವಾರ್ ತಾಜ್ ಅವರು ಶಿಹಾಬ್ ಪರವಾಗಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಚೌಧರಿ ಮೊಹಮ್ಮದ್ ಇಕ್ಬಾಲ್ ಮತ್ತು ನ್ಯಾಯಮೂರ್ತಿ ಮುಸಮಿಲ್ ಅಖ್ತರ್ ಶಬೀರ್ ಅವರನ್ನು ಒಳಗೊಂಡ ಲಾಹೋರ್ ಹೈಕೋರ್ಟ್ನ ವಿಭಾಗೀಯ ಪೀಠವು ಅರ್ಜಿಯನ್ನು ವಜಾಗೊಳಿಸಿದೆ. ಹೈಕೋರ್ಟ್ ನ ವಿಭಾಗೀಯ ಪೀಠವು ಈ ಸಂಬಂಧ ಏಕಸದಸ್ಯ ಪೀಠದ ತೀರ್ಪನ್ನು ಎತ್ತಿಹಿಡಿದಿದೆ ಎಂದು ಕೆಲ ಮಾಧ್ಯಮಗಳು ವರದಿಯಲ್ಲಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಸ್ಪಷ್ಟ ಮಾಹಿತಿ ಅಧಿಕೃತವಾಗಿಲ್ಲ.
ಸುಳ್ಳು ಸುದ್ದಿ: ಆಪ್ತವಲಯದಿಂದ ಸ್ಪಷ್ಟಣೆ!
ಪಾಕಿಸ್ತಾನದ ಓರ್ವ ಪ್ರಜೆ ಶಿಹಾಬ್ ಅವರ ಪರವಾಗಿ ಪಾಕ್ ಹೈಕೋರ್ಟ್’ಗೆ ಸಲ್ಲಿಸಿದ್ದ ಅರ್ಜಿಯನ್ನು ಅಲ್ಲಿಯ ಹೈಕೋರ್ಟ್ ತಿರಸ್ಕರಿಸಿದೆ ಎಂಬಂತೆ
ಕೆಲವೊಂದು ನ್ಯೂಸ್’ಗಳಲ್ಲಿ, ವಿಸಾ ತಿರಸ್ಕರಿಸಿದೆ ಎಂದು ಸುಳ್ಳು ಸುದ್ದಿ ಹರಡುತ್ತಿದೆ. ಶಿಹಾಬ್ ವಿಸಾ ಅರ್ಜಿ ತಿರಸ್ಕಾರವಾಗಿಲ್ಲ ಹಾಗೂ ಇವರು ಶಿಹಾಬ್ ರವರು ಹೈಕೋರ್ಟ್ ಗೆ ಯಾವುದೇ ಅರ್ಜಿಯೂ ಸಲ್ಲಿಸಲಿಲ್ಲ ಎಂಬುದು ಆಪ್ತವಲಯದ ಮೂಲಗಳಿಂದ ಸ್ಪಷ್ಟವಾಗಿವೆ.
ಒಟ್ಟಿನಲ್ಲಿ ಶಿಹಾಬ್ ರವರ ಕಾಲ್ನಾಡಿಗೆ ಯಾತ್ರೆಗೆ ಕಂಟಕಗಳು ಎದುರಾಗಿದೆಯಾ ಅಥವಾ ಸುದ್ದಿ ಮಾಧ್ಯಮಗಳನ್ನು ಜನರಲ್ಲಿ ಗೊಂದಲ ಸೃಷ್ಟಿಸಿದೆ.