ರೀಲ್ಸ್’ಗಾಗಿ ಕಾಲಿನಿಂದ ಟ್ರ್ಯಾಕ್ಟರ್‌ನ ಚಕ್ರ ಎತ್ತುವ ಹುಚ್ಚು ಸಾಹಸಕ್ಕಿಳಿದ ಯುವಕ
ಮುಂದೆ ಆಗಿದ್ದೇನು ಗೊತ್ತಾ..?
ರೀಲ್ಸ್ ಕ್ರೇಜ್ ಮಿತಿ ಮೀರಿದರೆ ಏನೆಲ್ಲಾ ಅನಾಹುತ ಸಂಭವಿಸುತ್ತದೆ ಎಂದು ಇತ್ತೀಚಿನ ಕೆಲವೊಂದು ಘಟನೆಗಳು ಸಾಕ್ಷಿಯಾಗಿತ್ತಿದೆ.
ಸೋಶಿಯಲ್ ಮೀಡಿಯಾಗಳಲ್ಲಿ ವಿವಿಧ ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವೊಂದಿಷ್ಟು ಜನರು ಮಿಲಿಯನ್ ವೀಕ್ಷಣೆಯನ್ನು ಪಡೆಯಲು ಹುಚ್ಚು ಸಾಹಸಕ್ಕೂ ಕೈ ಹಾಕುತ್ತಾರೆ. ಇದೀಗ ಅಂತದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಈ ವಿಡಿಯೋ ಒಂದೇ ದಿನದಲ್ಲಿ ವೀಕ್ಷಣೆ ಏನೋ ಕೋಟಿ ದಾಟಿರಬಹುದು. ಆದರೆ ಅಪಾಯಕಾರಿ ಸಾಹಸ ಪ್ರದರ್ಶಿಸಿದ ಯುವಕ ಇದೀಗ ತನ್ನ ಕಾಲನ್ನೇ ಕಳೆದುಕೊಂಡಿದ್ದಾನೆ.
ವೈರಲ್ ಆದ ವಿಡಿಯೋದಲ್ಲಿ ಯುವಕನೊಬ್ಬ ತನ್ನ ಎರಡು ಕಾಲುಗಳಿಂದ ಟ್ರ್ಯಾಕ್ಟರ್‌ನ ಹಿಂಬದಿಯ ಚಕ್ರವನ್ನು ಎತ್ತಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆದರೆ ಯುವಕನಿಗೆ ತಾನು ಎಷ್ಟು ತೊಂದರೆಯನ್ನು ಆಹ್ವಾನಿಸುತ್ತಿದ್ದೇನೆಂದು ತಿಳಿದಿರಲಿಲ್ಲ. ತನ್ನ ಕಾಲುಗಳಿಂದ ಟ್ರ್ಯಾಕ್ಟರ್‌ನ ಹಿಂಬದಿಯ ಚಕ್ರ ಎತ್ತುತ್ತಿದ್ದಂತೆ ಏಕಾಏಕಿ ಕಾಲಿನ ಮೂಳೆ ಮುರಿದಿದೆ. ಆ ವೇಳೆ ಆತ ಕಿರುಚಡುತ್ತಾನೆ. ಸದ್ಯ ವಿಡಿಯೋ ಎಲ್ಲಡೆ ಹರಿದಾಡುತ್ತಿದೆ.