ಆನ್’ಲೈನ್ ವಂಚನೆಯ ಜಾಲಕ್ಕೆ ಸಿಲುಕಿದ ಉಪನ್ಯಾಸಕಿ: ಬಾವಿಗೆ ಹಾರಿ ಆತ್ಮಹತ್ಯೆ
ಬಸವಕಲ್ಯಾಣ ತಾಲ್ಲೂಕಿನ ಆರತಿ ಕನಾಟೆ (28. ವ)ಎಂಬುವರು ಆನ್‌ಲೈನ್‌ನಲ್ಲಿ ಪರಿಚಯವಾದ ವ್ಯಕ್ತಿಯೊಂದಿಗೆ ಹಣದ ವ್ಯವಹಾರ ನಡೆಸಿ, ವಂಚನೆಗೆ ಒಳಗಾಗಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ
ಉಪನ್ಯಾಸಕಿಯಾಗಿರುವ ಆರತಿ ಅವರು ಆನ್‌ಲೈನ್ ಮೂಲಕ ಪರಿಚಯವಾದ ವ್ಯಕ್ತಿಯೊಂದಿಗೆ ಹಣ ಹೂಡಿಕೆ ಮಾಡಿದ್ದಾರೆ. ಮನೆಯಲ್ಲೇ ಕೂತು ಉದ್ಯೋಗ ಮಾಡಲು ಹಣ ಹೂಡಿಕೆ ಮಾಡಿ ಎಂದ ಕಾರಣ ಅವರು ಲಕ್ಷಾಂತರ ರೂ ಆನ್‌ಲೈನ್ ಮೂಲಕ ಕಳುಹಿಸಿದ್ದಾರೆ.
ನಂತರ ಇನ್ನೂ ಒಂದಷ್ಟು ಹಣ ಸಾವಿರ ಕಳುಹಿಸಿದರೆ ಎಲ್ಲ ಹಣ ಹಿಂದಿರುಗಿಸಲಾಗುವುದು ಎಂಬ ಸಂದೇಶ ಬಂತಾದರೂ ಅವರಿಗೆ ಅಷ್ಟು ಹಣ ಹೊಂದಿಸಲು ಸಾಧ್ಯವಾಗಿಲ್ಲ. ವಂಚನೆಗೆ ಒಳಗಾದ ಮತ್ತು ಕುಟುಂಬದ ಗಮನಕ್ಕೆ ತಾರದೇ ಲಕ್ಷಾಂತರ ರೂಪಾಯಿ ಕಳೆದುಕೊಂಡ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆತ್ಮಹತ್ಯೆಗೂ ಮುನ್ನ ಮನೆಯಲ್ಲಿ ಚಿನ್ನಾಭರಣ ತೆಗೆದಿಟ್ಟು, ಹಣ ಹೂಡಿಕೆ ಮಾಡಿದ ಏಜೆನ್ಸಿಯ ಹೆಸರಿರುವ ಚೀಟಿಯನ್ನು ಬರೆದಿಟ್ಟು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.