ಸಾನಿಯಾ ಮಿರ್ಜಾ-ಶೋಯೆಬ್ ಮಲಿಕ್ ದಾಂಪತ್ಯದಲ್ಲಿ ಬಿರುಕು
ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್
ಅವರ ದಾಂಪತ್ಯ ಬದುಕಿನಲ್ಲಿ ಉಂಟಾಗಿರುವ ಬಿರುಕಿನ ಬಗ್ಗೆ
ಕಳೆದ ಕೆಲವು ದಿನಗಳಿಂದ ಸಾಕಷ್ಟು ವದಂತಿಗಳು ಹರಿದಾಡುತ್ತಿದ್ದು ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ವಿಚ್ಛೇದನ ಪಡೆಯುವುದು ಖಚಿತ ಎನ್ನುವ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ.

ಸಾನಿಯ- ಮಲಿಕ್ ವೈಯಕ್ತಿಕ ಬದುಕಿನಲ್ಲಿ ಉಂಟಾಗಿರುವ ಸುಂಟರಗಾಳಿ ಇದೀಗ ಕ್ರೀಡಾ ಲೋಕದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಶೋಯೆಬ್ ಮಲಿಕ್ ಪಾಕಿಸ್ತಾನಿ ಹುಡುಗಿಯೊಂದಿಗೆ ಕೆಲವು ದಿನಗಳಿಂದ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಕೂಡ ಪಾಕಿಸ್ತಾನ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಸಾನಿಯಾ ಮತ್ತು ಮಲಿಕ್ ಅವರ ಸಂಬಂಧದಲ್ಲಿ ಕೆಲವು ತಿಂಗಳುಗಳಿಂದ ಬಿರುಕು ಇತ್ತು. ಇದರಿಂದಾಗಿ ಈ ಜೋಡಿಗಳು ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ಆದರೆ ಈ ಇಬ್ಬರೂ ಸಹ ಈ ವದಂತಿಯ ಬಗ್ಗೆ ಅಧಿಕೃತವಾಗಿ ಏನ್ನನ್ನು ಹೇಳಿಲ್ಲ. ಹೀಗಾಗಿ ಶೀಘ್ರದಲ್ಲೇ ಇಬ್ಬರೂ ಕಾನೂನು ವಿಷಯಗಳನ್ನು ಪೂರ್ಣಗೊಳಿಸಿದ ನಂತರ ಬೇರೆಯಾಗಲಿದ್ದಾರೆ ಎಂದು ವರದಿಯಾಗಿದೆ.
ಈ ಜೋಡಿಯ ನಡುವೆ ಬಿರುಕು ಮೂಡಲು ಶೋಯೆಬ್ ಮಲಿಕ್ ಕಾರಣವೆಂದು ಪಾಕ್ ಮೀಡಿಯಾಗಳು ವರದಿ ಮಾಡಿವೆ. ಕಳೆದ ವರ್ಷ ಶೋಯೆಬ್ ಮಲಿಕ್ ಪಾಕಿಸ್ತಾನಿ ನಟಿ ಆಯೇಶಾ ಒಮರ್ ಜೊತೆ ಹಾಟ್ ಫೋಟೋಶೂಟ್ ಮಾಡಿದ್ದರು. ಇದರಲ್ಲಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ತೆಗೆದಿದ್ದ ಅವರಿಬ್ಬರ ಹಾಟ್ ಫೋಟೋಗಳೂ ಇದ್ದವು. ಈ ಫೋಟೋಗಳು ಆ ಸಮಯದಲ್ಲಿ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಆ ವೇಳೆ ಆಯೇಶಾ ಒಮರ್ ಬಳಿ ಈ ಇಬ್ಬರ ನಡುವಿನ ಸಂಬಂಧದ ಬಗ್ಗೆ ಕೇಳಲಾಗಿತ್ತು. ಆದರೆ ಆಯೇಶಾ ಈ ಎಲ್ಲಾ ವದಂತಿಗಳನ್ನು ಸಾರಾಸಗಟಾಗಿ ನಿರಾಕರಿಸಿದ್ದರು.
2010ರಲ್ಲಿ ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಆದರೆ ಹಲವರು ಈ ಜೋಡಿ ಹೆಚ್ಚು ವರ್ಷ ಜೊತೆಯಾಗಿ ಬಾಳುವುದಿಲ್ಲ ಎಂದು ಹಲವರು ಹೇಳಿಕೊಂಡಿದ್ದರು. ಆದರೆ ಎಲ್ಲರ ಮಾತುಗಳನ್ನು ಸುಳ್ಳು ಮಾಡಿದ್ದ ಈ ಜೋಡಿ 12 ವರ್ಷಗಳ ಕಾಲ ಜೊತೆಗೆ ಜೀವನ ನಡೆಸಿತ್ತು. ಅಲ್ಲದೆ ಈ ದಂಪತಿಗಳಿಗೆ 2018 ರಲ್ಲಿ ಗಂಡು ಮಗು ಕೂಡ ಜನಿಸಿತ್ತು. ಆದರೆ 12 ವರ್ಷಗಳ ವೈವಾಹಿಕ ಬದುಕಿಗೆ ವಿದಾಯ ಹೇಳಲು ಮುಂದಾಗಿವೆ ಎಂದು ಹಲವು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಬಗ್ಗೆ ಸಾನಿಯಾ ಆಗಲಿ, ಶೋಯೆಬ್ ಮಲಿಕ್ ಆಗಲಿ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.