ಕರಾವಳಿ

ಗಡಿಮೀರಿ ಶಾಸಕ ಅಶೋಕ್ ರೈ ಮಾನವೀಯ ಸೇವೆ

ಪುತ್ತೂರು: ಬಂಟ್ವಾಳ ತಾಲೂಕು ಇರ್ವತ್ತೂರು ಗ್ರಾಮದ ಅಕ್ಬರ್ ಅಲಿ ಮೆಸ್ಕಾಂ ನಲ್ಲಿ ಗುತ್ತುಗೆದಾರರ ಜೊತೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಯುವಕ. 2026 ಜನವರಿ 9 ರಂದು ಇವರು ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಗುರಿಪಳ್ಳಕಜೆ ಎಂಬಲ್ಲಿ ವಿದ್ಯುತ್ ಕಂಬ ಏರಿ ಕೆಲಸ ಮಾಡುವ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ವಿದ್ಯುತ್ ಶಾಕ್ ನಿಂದ ಮೃತಪಟ್ಟಿದ್ದಾರೆ.

ಇವರದ್ದು ಬಡ ಕುಟುಂಬ. ಮೆಸ್ಕಾಂ ಕೆಲಸ ಮಾಡುವ ವೇಳೆ ಅವಘಡ ಆಗಿದೆ ಎಂದು ಪ್ರಕರಣವೂ ದಾಖಲಾಗಿತ್ತು ಗುತ್ತಿಗೆದಾರ ಖಾಸಗಿಯಾದ ಕಾರಣ ಮೆಸ್ಕಾಂ ನಿಂದ ಯಾವುದೇ ಪರಿಹಾರ ಸಿಕ್ಕಿರಲಿಲ್ಲ.

 



ಪರಿಹಾರ ಕೇಳಿಕೊಂಡು ಅಕ್ಬರ್ ಕುಟುಂಬ ಘಟಾನುಘಟಿ ನಾಯಕರ ಬಳಿ ಹೋಗಿದ್ದಾರೆ,ಮನವಿ ನೀಡಿದ್ದಾರೆ, ಆದರೆ ಯಾರು ಕೂಡಾ ಪರಿಹಾರ ಕೊಡಿಸುವಲ್ಲಿ ಮುತುವರ್ಜಿ ವಹಿಸಲೇ ಇಲ್ಲ. ಎಂಟು ತಿಂಗಳ ಬಳಿಕ ಅಕ್ಬರ್ ಕುಟುಂಬ ಶಾಸಕ ಅಶೋಕ್ ರೈ ಬಳಿ ಬಂದು ವಿಷಯ ತಿಳಿಸಿದ್ದಾರೆ. ಮನವಿ ಮಾಡುತ್ತೇನೆ ನೋಡುವ ಎಂದು ಕುಟುಂಬಕ್ಕೆ ಶಾಸಕರು ಭರವಸೆ ನೀಡಿದ್ದರು. ಕೊಟ್ಟ ಮಾತನ್ನು ಮರೆಯದ ಶಾಸಕ ಅಶೋಕ್ ರೈ ಅವರು ಮುಖ್ಯಮಂತ್ರಿಗೆ ಈ ಬಗ್ಗೆ ಮನವಿ ಮಾಡಿದ್ದಾರೆ. ಸಿ ಎಂ ಅವರು 3.00 ಲಕ್ಷ ಪರಿಹಾರವನ್ನೂ ಘೋಷಣೆ ಮಾಡಿದ್ದಾರೆ. ಪರಿಹಾರಕ್ಕಾಗಿ ನೊಂದು ಬೆಂದು ಹೋಗಿದ್ದ ಬಡ ಕುಟುಂಬಕ್ಕೆ ಕೊಂಚ ನೆಮ್ಮದಿ ಸಿಕ್ಕಿದೆ. ಗಡಿ ಮೀರಿದ ಶಾಸಕ ಅಶೋಕ್ ರೈ ಅವರ ಮಾನವೀಯ ಸೇವೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ

Leave a Reply

Your email address will not be published. Required fields are marked *

error: Content is protected !!