ಮಕ್ಕಳ ಹಕ್ಕುಗಳ ಸೇವೆಗಾಗಿ ಕಸ್ತೂರಿ ಬೊಳ್ವಾರ್ ರವರಿಗೆ ಡಾ. ಪದ್ಮಿನಿ ಪ್ರಶಸ್ತಿ
ಪುತ್ತೂರು: ಅಂತರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದ ಡಾ. ಪದ್ಮಿನಿ ಇವರ ಹೆಸರಿನಲ್ಲಿ ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದವರಿಗೆ ನೀಡಲಾಗುವ ಪ್ರಶಸ್ತಿಯನ್ನು ಬೆಂಗಳೂರಿನ ಚೈಲ್ಡ್ ರೈಟ್ ಟ್ರಸ್ಟ್ ಇವರು ಕಸ್ತೂರಿ ಬೋಳುವಾರು ಇವರಿಗೆ ನೀಡಿದ್ದು ಇವರನ್ನು ಪಡಿ ಸಂಸ್ಥೆ ಸಂಸ್ಥೆ ಮಂಗಳೂರು ಮತ್ತು ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು ಇವರುಗಳು ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಿದರು.

ಪುತ್ತೂರಿನ ಲಯನ್ಸ್ ಸಭಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಪಡಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೆನ್ನಿ ಡಿಸೋಜಾ, ಪುತ್ತೂರು ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಮೊಹಮ್ಮದ್ ರಫೀಕ್ ದರ್ಬೆ, ಉಪಾಧ್ಯಕ್ಷೆ ರೋಹಿಣಿ ರಾಘವ ಆಚಾರ್ಯ ಪುತ್ತೂರು, ಪುತ್ತೂರು ಲಯನ್ಸ್ ಕ್ಲಬ್ ನ ಅಧ್ಯಕ್ಷ ಮಂಜುನಾಥ್, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲೆ ಇದರ ಸದಸ್ಯರಾದ ನಂದ ಪಾಯಸ್, ರೋಟರಿ ಎಲೈಟ್ ನ ಮೌನೇಶ್ ವಿಶ್ವಕರ್ಮ ಉಪಸಿತರಿದ್ದರು. ಪಡಿ ಸಂಸ್ಥೆಯ ಸಂಯೋಜಕರಾದ ಮಮತಾ ಕಾರ್ಯಕ್ರಮ ನಿರೂಪಿಸಿದರು. ಜಯಕುಮಾರಿ ವಂದಿಸಿದರು.


