ಅಂತಾರಾಷ್ಟ್ರೀಯಕ್ರೈಂ

ವೈಭವ್ ಸೂರ್ಯವಂಶಿ ಕುರಿತು ಕ್ರಿಸ್ ಗೇಲ್ ಹೇಳಿದ್ದೇನು ಗೊತ್ತಾ?

ರಾಜಸ್ಥಾನ್ ರಾಯಲ್ಸ್‌ ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ 29 ಎಸೆತಗಳಲ್ಲಿ 97 ರನ್ ಸಿಡಿಸಿ ಎಲ್ಲರ ಗಮನ ಸೆಳೆದರು. ಇದರ ಬೆನ್ನಲ್ಲೇ ಇದೀಗ ಕ್ರಿಸ್ ಗೇಲ್ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಅತ್ಯುತ್ತಮ ವೈಭವ್ ಸೂರ್ಯವಂಶಿ, “ಹೊಸ ಸಿಕ್ಸರ್ ಯಂತ್ರ” ಎಂದು ಬಣ್ಣಿಸಿದ್ದಾರೆ.


2012ರ ಐಪಿಎಲ್ ಆವೃತ್ತಿಯಲ್ಲಿ ಕ್ರಿಸ್ ಗೇಲ್ 59 ಸಿಕ್ಸರ್ ಸಿಡಿಸಿದ್ದರು. ಈ ದಾಖಲೆಯನ್ನು ವೈಭವ್ ಸೂರ್ಯವಂಶಿ ಮುರಿದಿದ್ದಾರೆ. ಸೂರ್ಯವಂಶಿ ಒಟ್ಟು ಈ ಋತುವಿನಲ್ಲಿ ಒಟ್ಟು 65 ಸಿಕ್ಸರ್ ಸಿಡಿಸಿ ಐಪಿಎಲ್ ಸೀಸನ್‌ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ನಡುವೆ ವೈಭವ್ ಸೂರ್ಯವಂಶಿ ಗೇಲ್ ಅವರ ಅತ್ಯಂತ ವೇಗದ ಐಪಿಎಲ್ ಶತಕದ(30 ಎಸೆತ) ಸಿಡಿಸಿ ಈ ದಾಖಲೆ ಮುರಿಯುವುದನ್ನು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಗೇಲ್, ಇದು ದುರದೃಷ್ಟಕರ, ಆದರೆ ಅವರು ಈ ದಾಖಲೆಯನ್ನು ಮುರಿಯುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!