ಕರಾವಳಿಕ್ರೈಂ

ಕಡಬ: ಅಂಗಡಿಯ ಬೀಗ ಮುರಿದು ಕಳ್ಳತನ



ಕಡಬ: ಅಂಗಡಿಯೊಂದರ ಬೀಗ ಮುರಿದು ಒಳನುಗ್ಗಿರುವ ಕಳ್ಳರು ನಗದು ಕಳವುಗೈದಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ಬಲ್ಯ ಎಂಬಲ್ಲಿ ಬುಧವಾರ ನಡೆದಿದೆ.

ಸಾಂದರ್ಭಿಕ ಚಿತ್ರ



ಈಬಲ್ಯ ನಿವಾಸಿ ಬೇಬಿ ಕೆ.ಇ. ಎಂಬವರು ಕಡಬ ಠಾಣೆಗೆ ದೂರು ನೀಡಿದ್ದು, ಮಂಗಳವಾರ ರಾತ್ರಿ ತನ್ನ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದ ವೇಳೆ, ಕಳ್ಳರು ಬೀಗ ಮುರಿದು ಒಳಗೆ ನುಗ್ಗಿ 14 ಸಾವಿರ ರೂ. ನಗದು ಕಳವುಗೈದಿರುವುದಾಗಿ ತಿಳಿಸಿದ್ದಾರೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!