ಎಬೋಲಾ ವೈರಸ್ ಆತಂಕ: ರಾಜ್ಯದಲ್ಲಿ ಕಟ್ಟೆಚ್ಚರ
ಬೆಂಗಳೂರು: ಆಫ್ರಿಕಾದ ಹಲವು ಭಾಗಗಳಲ್ಲಿ ಎಬೋಲಾ ವೈರಸ್ ಹಾವಳಿ ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಭಾರತದಲ್ಲೂ ಕಟ್ಟೆಚ್ಚರಕ್ಕೆ ಆದೇಶ ನೀಡಲಾಗಿದೆ.

ಈಗಾಗಲೇ ರಾಷ್ಟ್ರ ರಾಜಧಾನಿ ನವದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಬೋಲಾ ಕುರಿತು ನೀಡಲಾಗಿದ್ದು, ಹೈ-ರಿಸ್ಕ್ ದೇಶಗಳ ಪ್ರಯಾಣಿಕರಿಗೆ ಹಲವು ಸೂಚನೆಗಳನ್ನ ನೀಡಲಾಗಿದೆ. ಈ ಬೆನ್ನಲ್ಲೇ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಏರ್‌ಪೋರ್‌ಟ್‌ಗಳಿಗೆ ಮಾರ್ಗಸೂಚಿ ಪ್ರಕಟ:
ತ್ರಿಬಲ್ ಲೇಯರ್ ಮಾಸ್ಕ್ ಕಡ್ಡಾಯ, ಹ್ಯಾಂಡ್ ಗ್ಲೌಸ್ ಹಾಕಬೇಕು,. ಸ್ಯಾನಿಟೇಸರ್ ಅನ್ನು ಇಟ್ಟುಕೊಳ್ಳಬೇಕು, ಎಬೋಲಾ ಶಂಕಿತ ಕೇಸ್ ಪತ್ತೆ ಆದರೆ ಕೂಡಲೇ ರಿಪೋರ್ಟ್ ಮಾಡಬೇಕು, ಪ್ರಯಾಣಿಕರ ಟ್ರಾವೆಲ್ ಹಿಸ್ಟರಿ ದಾಖಲು ಮಾಡಿಕೊಳ್ಳಬೇಕು. ಸೆಲ್ಪ್ ಡಿಕ್ಲರೇಷನ್ ಫಾರ್ಮ್ ಬರೆದುಕೊಡಬೇಕು. ಎಬೋಲಾ ಬಾಧಿತ ದೇಶಗಳಿಂದ ಬಂದರ ಡಿಟೇಲ್ಸ್ ಜೊತೆಗೆ ಸೆಲ್ಪ್ ಡಿಕ್ಲರೇ ಕಡ್ಡಾಯ




