ಧರ್ಮಸ್ಥಳ ಪ್ರಕರಣ: ದೂರುದಾರನನ್ನು ಕರೆತಂದ ಎಸ್.ಐ.ಟಿ ತಂಡದಿಂದ ಸ್ಥಳ ಮಹಜರು

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಮತ್ತು ದೂರುದಾರ ಬಿಗಿ ಪೊಲೀಸ್ ಭದ್ರತೆಯಲ್ಲಿ ಧರ್ಮಸ್ಥಳ ಗ್ರಾಮ ನೇತ್ರಾವತಿ ಸ್ನಾನ ಘಟ್ಟಕ್ಕೆ ಇಂದು ಮಧ್ಯಾಹ್ನ ಆಗಮಿಸಿದ್ದು, ದೂರುದಾರನನ್ನು ಕರೆತಂದು ಸ್ಥಳದ ಮಹಜರು ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದ್ದು ವಿವಿಧ ಇಲಾಖೆಗಳು ಸ್ಥಳಕ್ಕೆ ಆಗಮಿಸಿದೆ.