SDPI ಪುಣಚ ಗ್ರಾಮ ಸಮಿತಿ ಸಭೆ
ಪುತ್ತೂರು ವಿಧಾನ ಸಭಾ ಕ್ಷೇತ್ರದ ಪುಣಚ ಗ್ರಾಮ ಸಮಿತಿಯ ಮಾಸಿಕ ಸಭೆ ನ.13ರಂದು ಪರಿಯಲ್ತಡ್ಕದಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆಯಿತು.

ಗ್ರಾಮ ಸಮಿತಿ ಅಧ್ಯಕ್ಷರಾದ ಕಮರುದ್ದೀನ್ ಅಧ್ಯಕ್ಷತೆ ವಹಿಸಿದ್ದರು. SDPI ತಾಲೂಕು ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್ ರವರು ವೀಕ್ಷಕರಾಗಿ ಆಗಮಿಸಿ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು.
ಸಭೆಯಲ್ಲಿ ತಾಲೂಕು ಕಾರ್ಯದರ್ಶಿ ಉಸ್ಮಾನ್ ಎಕೆ ರವರು ಪ್ರಾಸ್ತಾವಿಕ ಮಾತನ್ನಾಡಿದರು. ಗ್ರಾಮ ಸಮಿತಿ ಕಾರ್ಯದರ್ಶಿ ಕರೀಂ ಸ್ವಾಗತಿಸಿದರು
ಸಭೆಯಲ್ಲಿ ಶಾಫಿ ಮಾಳಿಗೆ, ರಝಕ್ ಪುಣಚ, ಫಾರೂಕ್, ಸಿರಾಜ್ ಹಾಗೂ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು