ದ್ವಿತೀಯ ಪಿಯುಸಿ: ಸಂಪ್ಯ ಝಹ್ರಬತೂಲ್ ವುಮೆನ್ಸ್ ಕಾಲೇಜಿಗೆ 100% ಫಲಿತಾಂಶ
ಪುತ್ತೂರು: 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಂಪ್ಯ ಕಮ್ಮಾಡಿಯಲ್ಲಿ ಕಾರ್ಯಾಚರಿಸುತ್ತಿರುವ ಝಹ್ರಬತೂಲ್ ವುಮೆನ್ಸ್ ಕಾಲೇಜು ಶೇ.100 ಫಲಿತಾಂಶ ಪಡೆದುಕೊಂಡಿದೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ ಎಲ್ಲ 23 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.

ಆಯಿಶತುಲ್ ತಬ್ಶೀರ(550), ಫಾತಿಮತ್ ಹಫ್ಸ(543), ಮುಬಶ್ಶಿರತ್ ಫರ್ಹಾನ(523), ಫಾತಿಮತ್ ಬುಶ್ರಾ(521), ಫಾತಿಮತ್ ರಿಝಾ(519), ಆಶಿಕಾ ಕೆ(512) ಮೊದಲಾದ ಆರು ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ್ದಾರೆ.
9 ಮಂದಿ ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಝಹ್ರಬತೂಲ್ ವುಮೆನ್ಸ್ ಕಾಲೇಜಿನ ಪ್ರಾಂಶುಪಾಲರಾದ ಅಬೂಬಕ್ಕರ್ ಸಿದ್ದೀಕ್ ಜಲಾಲಿ ತಿಳಿಸಿದ್ದಾರೆ.