ಮುಂಡೂರು: ಮೈಸೂರಿಗೆ ಪ್ರವಾಸ ಹೋಗುತ್ತಿದ್ದ ವೇಳೆ ಹೃದಯಾಘಾತ: ವ್ಯಕ್ತಿ ಮೃತ್ಯು
ಪುತ್ತೂರು: ಮೈಸೂರಿಗೆ ಪ್ರವಾಸ ಹೊರಟಿದ್ದ ವ್ಯಕ್ತಿಯೋರ್ವರು ಪ್ರಯಾಣದ ಮಧ್ಯೆ ಹೃದಯಾಘಾತಕ್ಕೀಡಾಗಿ ಮೃತಪಟ್ಟ ಘಟನೆ ಡಿ.22ರಂದು ನಡೆದಿದೆ. ಮುಂಡೂರು ಗ್ರಾಮದ ಕೇದಗೆದಡಿ ನಿವಾಸಿ, ನರಿಮೊಗರು ಮರಾಠಿ ಸಂಘದ ಮಾಜಿ ಅಧ್ಯಕ್ಷರಈ ಮೋಹನ್ ನಾಯ್ಕ(50.ವ) ಮೃತಪಟ್ಟವರು.
ಡಿ.21ರಂದು ಬಸ್ ಮೂಲಕ ಪ್ರವಾಸಕ್ಕೆ ಹೊರಟಿದ್ದು ಅದರಲ್ಲಿ ಸುಮಾರು 60 ಮಂದಿ ಇದ್ದರು. ಮದೆನಾಡು ತಲುಪುತ್ತಿದ್ದಂತೆ ಮೋಹನ್ ನಾಯ್ಕ ಅವರಿಗೆ ಉಸಿರಾಟದ ತೊಂದರೆ ಉಂಟಾಗಿತ್ತು. ಬಳಿಕ ಅವರನ್ನು ರಾತ್ರಿ 2 ಗಂಟೆ ವೇಳೆಗೆ ಮಡಿಕೇರಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಅವರು ಕೊನೆಯುಸಿರೆಳೆದಿದ್ದರು ಎಂದು ತಿಳಿದು ಬಂದಿದೆ.
ಬಳಿಕ ಅಲ್ಲಿಂದ ಆಂಬ್ಯುಲೆನ್ಸ್ ಮೂಲಕ ಮೃತದೇಹವನ್ನು ಕೇದಗೆದಡಿಗೆ ತರಲಾಯಿತು. ಮದ್ಯಾಹ್ನದ ವೇಳೆಗೆ ಮೃತರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಮೃತರು ಕೊಡಿನೀರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಪುಷ್ಪಾ, ಪುತ್ರಿಯರಾದ ಅಶ್ವಿತಾ, ಅರ್ಪಿತಾ ಹಾಗೂ ಪುತ್ರ ಸತ್ಯ, ತಾಯಿ ಸುಂದರಿ, ಸಹೋದರಿ ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ಸಹೋದರರಾದ ನೆಕ್ಕಿಲಾಡಿ ಗ್ರಾ.ಪಂ ಪಿಡಿಓ ದೇವಪ್ಪ ನಾಯ್ಕ, ಸಂಜೀವ ನಾಯ್ಕ, ಜಿನ್ನಪ್ಪ ನಾಯ್ಕ ಅವರನ್ನು ಅಗಲಿದ್ದಾರೆ.