ಕರಾವಳಿ

ಕಾಲ್ನಡಿಗೆ ಮೂಲಕ ಹಜ್ ಯಾತ್ರೆ ಕೈಗೊಂಡ ಉಪ್ಪಿನಂಗಡಿಯ ಯುವಕ ಇಂದು ಊರಿಗೆ

ಉಪ್ಪಿನಂಗಡಿ ಸಮೀಪದ ಪೆರಿಯಡ್ಕದಿಂದ 2023 ಜನವರಿ 30ರಂದು ಸೌದಿ ಅರೇಬಿಯಾದ ಪವಿತ್ರ ಮಕ್ಕಾಗೆ ಕಾಲ್ನಡಿಗೆ ಯಾತ್ರೆ ಹಮ್ಮಿಕೊಂಡಿದ್ದ ಅಬ್ದುಲ್ ಖಲೀಲ್(ನೌಶಾದ್ ಬಿಕೆಎಸ್) ಅವರು 2024 ಫೆ.1ರಂದು ಮಕ್ಕಾ ತಲುಪಿದ್ದರು. ಆ ಮೂಲಕ ಒಂದು ವರ್ಷ ಎರಡು ದಿನಗಳ ತನ್ನ ಸುಧೀರ್ಘ ಕಾಲ್ನಡಿಗೆ ಬಳಿಕ ಅವರು ಮಕ್ಕಾ ತಲುಪಿದ್ದರು. ಇದೀಗ ಈ ಬಾರಿಯ ಹಜ್ ಕರ್ಮ ನಿರ್ವಹಿಸಿದ ಅವರು ಜೂ.21ರಂದು ಊರಿಗೆ ವಾಪಸ್ ಬರಲಿದ್ದಾರೆ. ಊರಿನಲ್ಲಿ ಅವರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!