ಕರಾವಳಿ

ಆಕರ್ಷಣ್ ನಿಂದ ಗ್ರಾಹಕರಿಗೆ ಬಿಗ್ ಆಫರ್…! ೨೭ ಕಿ ಮೀ ಉಚಿತ ಡೆಲಿವರಿ …!



ಪುತ್ತೂರು: ಪುತ್ತೂರಿನ ಮುಕ್ರಂಪಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿ 1996 ರಲ್ಲಿ ಪ್ರಾರಂಭಗೊಂಡ ಆಕರ್ಷಣ್ ಇಂಡಸ್ಟ್ರೀಸ್ ಕಳೆದ 26 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸಿಮೆಂಟ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಸಿಮೆಂಟ್ ಉತ್ಪನ್ನಗಳಿಗೆ ಹೆಸರುವಾಸಿಯಾಗಿರುವ ಆಕರ್ಷಣ್ ತನ್ನ ಸಂಸ್ಥೆಯ 27 ವರ್ಷಕ್ಕೆ ಪಾದಾರ್ಪಣೆಗೈಯ್ಯುವ ಶುಭ ಸಂದರ್ಭದಲ್ಲಿ ಗ್ರಾಹಕರಿಗೆ ಬಿಗ್ ಆಫರ್ ಸೌಲಭ್ಯವನ್ನು ಕಲ್ಪಿಸಿದೆ. ಸಂಸ್ಥೆಯು ಗ್ರಾಹಕರಿಗೆ ಉಚಿತ ಡೆಲಿವರಿ ವ್ಯವಸ್ಥೆಯನ್ನು ಕಲ್ಪಿಸಿದ್ದು 27 ಕಿಮೀ ವರೆಗೂ ಸಂಪೂರ್ಣವಾಗಿ ಉಚಿತ ಡೆಲಿವರಿ ಅ.21 ರಿಂದ ಕಾರ್ಯಾರಂಭಿಸಿದೆ.

ಸಂಸ್ಥೆಯಲ್ಲಿ ದೊರೆಯುವ ಸಿಮೆಂಟ್ ಉತ್ಪನ್ನಗಳು: ಕೌಂಪೌಂಡ್ ವಾಲ್, ರೈಲ್ವೇ ಗ್ರಿಲ್, ಬೇಲಿಕಂಬಗಳು, ವೈ ಆಕಾರದ ಕಂಬಗಳು, ಶೌಚಾಲಯ ರಿಂಗ್, ಕಾಳುಮೆಣಸು ಕಂಬಗಳು, ಕಾಂಪೋಸ್ಟ್ ಶೆಡ್, ಟಿನಿ ಹೋಂ (ರೆಡಿಮೇಡ್ ಮನೆ) ವಾಚ್ ಟವರ್, ಸೆಕ್ಯುರಿಟಿ ಕ್ಯಾಬಿನ್, ಸೋಫಾ, ಡಿಸೈನ್ ಪಿಲ್ಲರ್‌ಗಳು, ಡಾಗ್ ಹೌಸ್, ಡಾಗ್ ಹೌಸ್ ಸುಮೊ, ಡಾಗ್ ಹೌಸ್ ಬಿಗ್, ಚೇಂಬರ್ ಕವರ್, ಡ್ರೈನೇಜ್ ಸ್ಲಾಬ್ಸ್, ಜೇನು ಸ್ಟ್ಯಾಂಡ್, ಪಂಪ್ ಹೌಸ್, ಥೂನ್, ವಿಶಾಖಾ ಸಿಮೆಂಟ್ ಶೀಟ್, ದಾರಂದ, ಕಿಟಕಿ, ಡ್ರಾಗನ್ ಫ್ರ್ಯುಟ್ ಸ್ಟ್ಯಾಂಡ್, ಮೋರಿ ಪೈಪ್, ಕವರ್ ಬ್ಲಾಕ್ಸ್, ಮತ್ತು ಇಂಟರ್ ಲಾಕ್ ಸೇರಿದಂತೆ ಇತರೆ ಸಿಮೆಂಟ್ ಉತ್ಪನ್ನಗಳು

ಕನಿಷ್ಠ ಆರ್ಡರ್‌ಗೂ ಉಚಿತ ಡೆಲಿವರಿ: ಸಂಸ್ಥೆಯ ೨೭ ವಾರ್ಷಿಕ ಉತ್ಸವದ ಅಂಗವಗಿ ಗ್ರಾಹಕರು ಕನಿಷ್ಠ ಸಾಮಾಗ್ರಿಗಳ ಆರ್ಡರ್ ಮಾಡಿದರೂ ಡೆಲಿವರಿ ಉಚಿತವಾಗಿ ನೀಡಲಾಗುತ್ತದೆ. ಕೆಲವೇ ದಿನಗಳು ಮಾತ್ರ ಈ ಆಫರ್ ಸೌಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಕಾಂಪೌಂಡ್ ವಾಲ್ ಭಾರೀ ಬೇಡಿಕೆ: ಆಕರ್ಷಣ್ ಸಂಸ್ಥೆಯಿಂದ ನಿರ್ಮಾಣ ಮಾಡುತ್ತಿರುವ ಕೌಂಪೌಂಡ್ ವಾಲ್‌ಗೆ ಭಾರೀ ಬೇಡಿಕೆ ಇದ್ದು ಅತ್ಯಂತ ಕಡಿಮೆ ಖರ್ಚಿನಲ್ಲಿ ದೀರ್ಘ ಬಾಳಿಕೆಯ ಕೌಂಪೌಂಡ್ ವಾಲ್ ಕೆಲವೇ ಗಂಟೆಗಳಲ್ಲಿ ಸಿದ್ದಪಡಿಸಿ ಅಳವಡಿಸಿಕೊಡುತ್ತಿದ್ದಾರೆ. ಅದೇ ರೀತಿ ಬೇಲಿಕಂಬಗಳು, ಪೆಪ್ಪರ್ ಪೋಲ್ಸ್, ಕಂಪೋಸ್ಟ್ ಶೆಡ್, ನಾಯಿ ಗೂಡುಗಳಿಗೂ ಹೆಚ್ಚಿನ ಬೇಡಿಕೆ ಗ್ರಾಹಕರಿಂದ ವ್ಯಕ್ತವಾಗುತ್ತಿದ್ದು, ಗುಣಮಟ್ಟದಲ್ಲಿ ಯವುದೇ ರಾಜಿಯಿಲ್ಲದೆ ಗ್ರಾಹಕರಿಗೆ ಕಡಿಮೆ ದರದಲ್ಲಿ ಸಿಮೆಂಟ್ ಉತ್ಪನ್ನಗಳನ್ನು ನೀಡುತ್ತಿರುವುದು ಸಂಸ್ಥೆಯ ವಿಶೇಷತೆಯಾಗಿದೆ.

Leave a Reply

Your email address will not be published. Required fields are marked *

error: Content is protected !!