ಇಂದು ವಿಚಾರಣೆ: ಸೌದಿ ಜೈಲಿನಿಂದ ಬಿಡುಗಡೆ ಆಗ್ತಾರಾ ಅಬ್ದುಲ್ ರಹೀಂ?
ಸೌದಿ ಜೈಲಿನಲ್ಲಿರುವ ಅಬ್ದುಲ್ ರಹೀಮ್ ಅವರ ಪ್ರಕರಣವನ್ನು ನ್ಯಾಯಾಲಯ ಡಿ.8ರಂದು ಪರಿಗಣಿಸಲಿದೆ ಎನ್ನಲಾಗಿದ್ದು ಹಲವು ವರ್ಷಗಳಿಂದ ಜೈಲಲ್ಲಿ ಬಂಧಿಯಾಗಿರುವ ಅಬ್ದುಲ್ ರಹೀಮ್ ಅವರು ಬಿಡುಗಡೆಯಾಗಿ ಊರಿಗೆ ಮರಳುವ ನಿರೀಕ್ಷೆಯಲ್ಲಿ ಅವರ ಕುಟುಂಬ ಕಾಯುತ್ತಿದೆ.
ರಿಯಾದ್ ಕ್ರಿಮಿನಲ್ ನ್ಯಾಯಾಲಯವು ಅಬ್ದುರಹೀಮ್ ಜೈಲಿನಿಂದ ಬಿಡುಗಡೆಗೆ ಸಂಬಂಧಿಸಿದ ಪ್ರಕರಣವನ್ನು ಕಳೆದ ತಿಂಗಳು ಪರಿಗಣಿಸಿತು. ಅಂತಿಮ ತೀರ್ಪಿಗೆ ಅಬ್ದುಲ್ ರಹೀಂ ಕಾಯುತ್ತಿದ್ದಾರೆ. 32 ಕೋಟಿ ರೂ ಸಂಗ್ರಹಿಸಿ ಮೃತಪಟ್ಟ ಸೌದಿ ಹುಡುಗನ ಕುಟುಂಬಕ್ಕೆ ಹಸ್ತಾಂತರಿಸಿದ ನಂತರ ಮರಣದಂಡನೆಯನ್ನು ರದ್ದುಗೊಳಿಸಲಾಗಿತ್ತು.