ಗೃಹಲಕ್ಷ್ಮಿ ಯೋಜನೆಯ ಹಣ ಕೂಡಿಟ್ಟು ಬೋರ್ವೆಲ್ ಕೊರೆಸಿದ ಅತ್ತೆ-ಸೊಸೆ
ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹಣ ಕೂಡಿಟ್ಟು ಗದಗಿನ ಅತ್ತೆ-ಸೊಸೆ ಬೋರ್ವೆಲ್ ಕೊರೆಸಿದ್ದಾರೆ
ಅತ್ತೆ ಮಾಬುಬೀ, ಸೊಸೆ ರೋಷನ್ ಬೇಗಂ ಗೃಹಲಕ್ಷ್ಮಿ ಯೋಜನೆ ಹಣವನ್ನು ಪ್ರತಿ ತಿಂಗಳು ಕೂಡಿಟ್ಟಿದ್ದಾರೆ. ಹೀಗೆ ಕೂಡಿಟ್ಟ 44 ಸಾವಿರ ರೂ. ಅನ್ನು ಬೋರ್ವೆಲ್ ಕೊರಿಸಲು ನೀಡಿದ್ದಾರೆ. ಬೋರ್ವೆಲ್ ಕೊರಿಸಲು 60 ಸಾವಿರ ರೂ. ಖರ್ಚು ಆಗಿದೆ. ಅದರಲ್ಲಿ ಗೃಹಲಕ್ಷ್ಮಿ ಯೋಜನೆಯ 44 ಸಾವಿರ ರೂ. ಬಳಿಕೆ ಮಾಡಿದ್ದಾರೆ. ಇನ್ನುಳಿದ್ದ ಹಣ ಮಗ ಹಾಕಿ ಬೋರ್ವೆಲ್ ಕೊರಿಸಿದ್ದಾರೆ.
ಕೊಳವೆ ಬಾವಿ ಕೊರೆಸುತ್ತಿದ್ದಂತೆ ಭರ್ಜರಿ ನೀರು ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ಅವರು ನೀಡಿದ ಗೃಹಲಕ್ಷ್ಮಿ ಯೋಜನೆ ತುಂಬಾನೆ ಅನುಕೂಲವಾಗಿದೆ. ಅವರಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಅತ್ತೆ-ಸೂಸೆ ಹೇಳಿದ್ದಾರೆ. ಅತ್ತೆ ಸೊಸೆ ಸೇರಿ ಬೋರ್ ವೆಲ್ ಕೊರೆಸಿದ್ದ ವಿಚಾರ ತಿಳಿದು ಡಿಸಿಎಂ ಡಿಕೆ ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.