ರಾಷ್ಟ್ರೀಯ

ಮುಂದಿನ ಐದು ವರ್ಷಗಳ ಅವಧಿಗೆ PFI ನಿಷೇಧಿಸಿದ ಕೇಂದ್ರ ಗೃಹ ಸಚಿವಾಲಯ



ಹೊಸದಿಲ್ಲಿ: ದೇಶಾದ್ಯಂತ ಮುಂದಿನ ಐದು ವರ್ಷಗಳ ಅವಧಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯನ್ನು ನಿಷೇಧಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.

PFI ಜತೆ ನಂಟು ಹೊಂದಿರುವ ಎಂಟು ಸಹ ಸಂಸ್ಥೆಗಳನ್ನು ಕೂಡಾ ನಿಷೇಧಿಸಲಾಗಿದೆ. ತನಿಖಾ ಏಜೆನ್ಸಿಗಳ ವರದಿ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

ಕಾನೂನು ಬಾಹಿರ ಸಂಘಟನೆಗಾಗಿ PFI ಹಾಗೂ ಇತರ ಎಂಟು ಸಹ ಸಂಸ್ಥೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಅನ್ವಯ ನಿಷೇಧೀಸಲಾಗಿದೆ ಎಂದು ಸರ್ಕಾರದ ಅಧಿಸೂಚನೆ ಹೇಳಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ಅಂಗಸಂಸ್ಥೆಗಳಾದ ರೆಹಾಬ್ ಇಂಡಿಯಾ ಫೌಂಡೇಶನ್ (Rehab India Foundation), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (AIIC), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಷನ್ (NCHRO), ನ್ಯಾಷನಲ್ ವಿಮೆನ್ಸ್ ಫ್ರಂಟ್ (NWF), ಜೂನಿಯರ್ ಫ್ರಂಟ್ (JF), ಎಂಪವರ್ ಇಂಡಿಯಾ ಫೌಂಡೇಶನ್ (EIF) ಮತ್ತು ರಿಹಾಬ್ ಫೌಂಡೇಶನ್, ಕೇರಳ ಇವುಗಳನ್ನು (EFRF) ನಿಷೇಧಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!