ಆರೋಗ್ಯರಾಜಕೀಯರಾಜ್ಯ

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದ ಅಪರಿಚಿತರು!

ಪುತ್ತೂರು: ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೆಸರಿನಲ್ಲಿ ಅಪರಿಚಿತರು ನಕಲಿ ಫೇಸ್‌ಬುಕ್ ಖಾತೆ ತೆರೆದಿದ್ದು ಈ ಬಕುರಿತು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.

ವಿನಯ ಕುಮಾರ್ ಸೊರಕೆ ಹೆಸರಿನಲ್ಲಿ ಅಪರಿಚಿತ ವ್ಯಕ್ತಿಗಳು ನಕಲಿ ಫೇಸ್‌ಬುಕ್ ಖಾತೆಯನ್ನು ಸೃಷ್ಟಿಸಿ, ಅದರ ಪ್ರೊಫೈಲ್‌ಗೆ ವಿನಯ ಕುಮಾರ್ ಸೊರಕೆ ಅವರ ಫೋಟೋವನ್ನು ದುರ್ಬಳಕೆ ಮಾಡಿದ್ದಾರೆ. ನಕಲಿ  ಖಾತೆಯನ್ನು ತೆರೆದು ಸಂದೇಶವನ್ನು ಕಳುಹಿಸುತ್ತಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ವಿನಯ ಕುಮಾರ್ ಸೊರಕೆ ಅವರು ಸ್ಪಷ್ಟೀಕರಣ ನೀಡಿದ್ದು, ನನ್ನ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಅದರ ಮೂಲಕವಾಗಿ ಜನರೊಂದಿಗೆ ಸಂಪರ್ಕಕ್ಕೆ ಬರುತ್ತಿರುವ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಆ ಖಾತೆಯಿಂದ ಬರುವ ರಿಕ್ವೆಸ್ಟ್‌ ಅಥವಾ ಸಂದೇಶಗಳಿಗೂ, ನನಗೂ ಸಂಬಂಧವಿಲ್ಲ. ಈ ರೀತಿಯ ಖಾತೆಯಿಂದ ಸಂಪರ್ಕಿಸಲ್ಪಟ್ಟರೆ ಯಾವುದೇ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ ಅಥವಾ ಸಂಪರ್ಕಿಸಬೇಡಿ. ಅಂತಹ ಖಾತೆಯನ್ನು ತತ್‌ಕ್ಷಣವೇ ಫೇಸ್‌ಬುಕ್‌ಗೆ ವರದಿ ಮಾಡುವಂತೆ ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!