ಲೋಕಸಭಾ ಚುನಾವಣೆ: ನಟಿ ಕಂಗನಾ ರಣಾವತ್’ಗೆ ಬಿಜೆಪಿ ಟಿಕೆಟ್
ಲೋಕಸಭಾ ಚುನಾವಣೆಗೆ ಬಿಜೆಪಿ 5ನೇ ಪಟ್ಟಿ ಬಿಡುಗಡೆ ಮಾಡಿದ್ದು ನಟಿ ಕಂಗನಾ ರಣಾವತ್ ಅವರಿಗೆ ಟಿಕೆಟ್ ನೀಡಿದೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪರವಾಗಿ ಹೇಳಿಕೆಗಳನ್ನು ನೀಡುತ್ತಾ, ಬಿಜೆಪಿ ಬೆಂಬಲಿಸುತ್ತಾ ಬಂದಿದ್ದ ಕಂಗನಾ ರಣಾವತ್ ಅವರಿಗೆ ಈಗ ಬಿಜೆಪಿ ಟಿಕೆಟ್ ಸಿಕ್ಕಿದ್ದು ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಅವರು ಸ್ಪರ್ಧಿಸಲಿದ್ದಾರೆ. ಆ ಮೂಲಕ ಕಂಗನಾ ರಣಾವತ್ ಅವರು ರಾಜಕೀಯದ ಅಖಾಡಕ್ಕೆ ಧುಮುಕಿದ್ದಾರೆ.