Uncategorized

ಕೆಮ್ಮಾಯಿ ಮುಈನುಲ್ ಇಸ್ಲಾಂ ಜಮಾಅತ್ ಕಮಿಟಿ ವಾರ್ಷಿಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

ಪುತ್ತೂರು: ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿಯಾದ ಮುಈನುಲ್ ಇಸ್ಲಾಂ ಜಮಾಅತ್ ಕಮಿಟಿ ಕೆಮ್ಮಾಯಿ ಇದರ ವಾರ್ಷಿಕ ಮಹಾಸಭೆ ಗೌರವಾಧ್ಯಕ್ಷರಾದ ಸಯ್ಯಿದ್ ಅಹ್ಮದ್ ಪೂಕೋಯ ತಂಙಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯದರ್ಶಿ ಹಕೀಂ ಡಿ.ಕೆ ಅವರು ಗತವರ್ಷದ ವರದಿಯನ್ನು ವಾಚಿಸಿದರು.
ನಂತರ ನೂತನ ಕಮಿಟಿ ರಚನೆ ಹಾಗೂ ಜಮಾಅತಿನ ಆಗು ಹೋಗುಗಳ ಕುರಿತು ಚರ್ಚಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ತಂಙಲ್ ಅವರು ಮಾತನಾಡಿ, ಅಲ್ಲಾಹನ ಮಸೀದಿಯ ಪರಿಪಾಲನೆಯು ಮುಸ್ಲಿಮರಾದ ನಮ್ಮೆಲ್ಲರ ಕರ್ತವ್ಯವಾಗಿದೆ. ಪಾರ್ಟಿ ಪಂಗಡ ಎಂಬ ಬೇಧಭಾವ ಬದಿಗಿಟ್ಟು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿರಿ ಎಂದು ಕರೆ ನೀಡಿದರು.


ಆಧುನಿಕ ಜಗತ್ತಿನ ಐಶಾರಾಮಿ ಜೀವನಕ್ಕೆ ಬೇಕಾಬಿಟ್ಟಿ ಖರ್ಚುಮಾಡುವ ನಾವುಗಳು ಮಸೀದಿ ಮದ್ರಸ ವಿಚಾರ ಬಂದಾಗ ವಂತಿಗೆ ವಿಚಾರದಲ್ಲಿ ತಕರಾರು ಎತ್ತುತ್ತೇವೆ. ತಿಂಗಳಿಗೆ 500/1000 ಮೊಬೈಲ್, ಚಹಾ ತಿಂಡಿ ಅಂತ ದುಂದು ವೆಚ್ಚ ಮಾಡುವ ನಾವು ಅಲ್ಲಾಹನ ಮಸೀದಿಗೆ 50₹ ಹೆಚ್ಚು ನೀಡಲು ಹಿಂದೇಟು ಹಾಕುವುತ್ತೇವೆ. ಹೀಗೆ ಮಾಡುವುದು ಅಲ್ಲಾಹನನ್ನು ದಿಕ್ಕರಿಸುವುದಕ್ಕೆ ಸಮ ಎಂದು ತಂಙಳ್ ಹೇಳಿದರು.


ನಂತರ 2024-25ನೇ ಸಾಲಿನ ನೂತನ ಕಮಿಟಿ ರಚಿಸಲಾಯಿತು.ಗೌರವಾಧ್ಯಕ್ಷರಾಗಿ ಸಯ್ಯಿದ್ ಅಲ್ ಹಾಜಿ ಅಹ್ಮದ್ ಪೂಕೋಯ ತಂಙಳ್ ಪುತ್ತೂರು, ಅಧ್ಯಕ್ಷರಾಗಿ ಅಶ್ರಫ್ ಹಾಜಿ ದಾರಂದಕುಕ್ಕು, ಪ್ರಧಾನ ಕಾರ್ಯದರ್ಶಿಯಾಗಿ ಹಸನ್ ಹಾಜಿ ಕೊಡಾಜೆ ಕೋಶಾಧಿಕಾರಿಯಾಗಿ ಉಮರ್ ದಾರಂದಕುಕ್ಕು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಅಬ್ದುಲ್ ಲತೀಫ್ ಹಾಜಿ ಕೆಮ್ಮಾಯಿ, ಜೊತೆ ಕಾರ್ಯದರ್ಶಿಯಾಗಿ ಹಕೀಂ ದಾರಂದಕುಕ್ಕು ಹಾಗೂ 20 ಮಂದಿ ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು. ಕಾರ್ಯಕ್ರಮವನ್ನು ಖತೀಬರಾದ ಮುಈನುದ್ದೀನ್ ಮದನಿ ಅವರು ಉದ್ಘಾಟಿಸಿದರು.

Leave a Reply

Your email address will not be published. Required fields are marked *

error: Content is protected !!