ಅಂತಾರಾಷ್ಟ್ರೀಯಕ್ರೀಡೆರಾಷ್ಟ್ರೀಯ

ತಾಲಿಬಾನ್ ವಿರುದ್ಧ ತಿರುಗಿ ನಿಂತ ರಶೀದ್ ಖಾನ್

ಅಫ್ಘಾನಿಸ್ತಾನ್ ಟಿ20 ತಂಡದ ನಾಯಕ ರಶೀದ್ ಖಾನ್ ತಾಲಿಬಾನ್ ಸರ್ಕಾರ ನಿರ್ಧಾರಗಳ ಬಗ್ಗೆ ಅಸಮಾಧಾನ ಹೊರಹಾಕುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಅಫ್ಘಾನ್ ಧ್ವಜವನ್ನು ಬದಲಿಸಲು ಮುಂದಾಗಿದ್ದ ತಾಲಿಬಾನ್ ವಿರುದ್ಧ ರಶೀದ್ ಖಾನ್ ಆಕ್ರೋಶ ಹೊರಹಾಕಿದ್ದರು.

ಅಫ್ಘಾನಿಸ್ತಾನ್ ಮಹಿಳೆಯರಿಗೆ ನರ್ಸಿಂಗ್ ಶಿಕ್ಷಣವನ್ನು ನಿಷೇಧಿಸಿರುವ ತಾಲಿಬಾನ್ ಕ್ರಮವನ್ನು ಅಫ್ಘಾನ್ ಕ್ರಿಕೆಟಿಗ ರಶೀದ್ ಖಾನ್  ಖಂಡಿಸಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶ ಹೊರಹಾಕಿರುವ ರಶೀದ್ ಖಾನ್, ತಾಯ್ನಾಡಿನಲ್ಲಿ ಮಹಿಳೆಯರಿಗೆ ವಿಧಿಸಿರುವ ನಿರ್ಬಂಧಗಳ ಬಗ್ಗೆ ತಮ್ಮ ಕಳವಳ ಮತ್ತು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ತಾಲಿಬಾನ್ ಸರ್ಕಾರ ಸಚಿವ ಹಿಬತುಲ್ಲಾ ಅಖುಂದ್ಜಾದಾ ಅವರು ಡಿಸೆಂಬರ್ 2 ರಂದು ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ವೈದ್ಯಕೀಯ ತರಬೇತಿಯನ್ನು ನಿಷೇಧಿಸುವ ಆದೇಶವನ್ನು ಹೊರಡಿಸಿದ್ದರು.

Leave a Reply

Your email address will not be published. Required fields are marked *

error: Content is protected !!